Kannada NewsKarnataka NewsLatest

*ವಿದ್ಯಾರ್ಥಿನಿಗೆ ನಾಗರಹಾವು ಕಡಿತ: ಬಾಯಿಯಿಂದ ವಿಷ ತೆಗೆಯಲು ಯತ್ನಿಸಿದ ಶಿಕ್ಷಕನ ಸ್ಥಿತಿಯೂ ಗಂಭೀರ*

ಪ್ರಗತಿವಾಹಿನಿ ಸುದ್ದಿ: ನಾಗರಹಾವು ಕಡಿತಕ್ಕೊಳಗಾಗಿದ್ದ ಒಂದನೇ ತರಗತಿಯ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ.

ಸೃಷ್ಟಿ(6) ಹಾವು ಕಡಿತಕ್ಕೊಳಗಾದ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಶಾಲಾ ಆವರಣದಲ್ಲಿ ಕುಳಿತಿದ್ದಾಗ ನಾಗರಹಾವು ಕಡಿದಿದೆ. ಈ ವೇಳೆ ಶಾಲಾ ಶಿಕ್ಷಕ ರವಿಶಂಕರ್ ಬಾಯಿಂದ ವಿಷ ತೆಗೆಯಲು ಯತ್ನಿಸಿದ್ದಾರೆ. ಅವರ ಸ್ಥಿತಿ ಕೂಡ ಗಂಭೀರವಾಗಿದ್ದು, ಸದ್ಯ ಅಸ್ವಸ್ಥಗೊಂಡ ಸೃಷ್ಠಿಯನ್ನು ಖಾಸಗಿ ಆಸ್ಪತ್ರೆಗೆ ಮತ್ತು ರವಿಶಂಕರ್​​ರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


Home add -Advt

Related Articles

Back to top button