ಪ್ರಗತಿವಾಹಿನಿ ಸುದ್ದಿ, ಗೋಕಾಕ
ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡುವುದಿಲ್ಲ. ಕಾಂಗ್ರೆಸ್ ನಲ್ಲೇ ಮುಂದುವರಿಯುತ್ತಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಪುನರುಚ್ಛರಿಸಿದ್ದಾರೆ.
ಗೋಕಾಕದಲ್ಲಿ ಕನಕದಾಸ ಜಯಂತಿ ಉತ್ಸವದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲವೆ ಇಲ್ಲ. ನಮ್ಮ ಪಕ್ಷದಲ್ಲೆ ರಮೇಶ್ ಮುಂದುವರೆಯುತ್ತಾರೆ. ನನಗೆ ಅವರು ಸಿಕ್ಕಿಲ್ಲ. ಅವರೊಂದಿಗೆ ಇವತ್ತು ಮಾತನಾಡುತ್ತೆನೆ ಎಂದು ಅವರು ಹೇಳಿದರು.
ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೆ ಮುಂದುವರೆಯುತ್ತೇವೆ ಎಂದರು ಅವರು.
ಈ ಮಧ್ಯೆ ಕಳೆದ ಒಂದು ವಾರದಿಂದ ಯಾರೂ ಕಾಣಿಸದ ರಮೇಶ ಜಾರಕಿಹೊಳಿ ಮಂಗಳವಾರ ರಾತ್ರಿ ಗೋಕಾಕದ ನಿವಾಸಕ್ಕೆ ಆಗಮಿಸಿ, ಬುಧವಾರ ಬೆಳಗ್ಗೆ ತೆರಳಿದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ