*ಬೀರೇಶ್ವರ ಸೊಸಾಯಿಟಿಗೆ 51.04 ಕೋಟಿ ರೂ. ನಿವ್ವಳ ಲಾಭ: ಅಣ್ಣಾಸಾಹೇಬ ಜೊಲ್ಲೆ ಮಾಹಿತಿ*

*ಯಕ್ಸಂಬಾ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿಗೆ 51.04*ಕೋಟಿ ನಿವ್ವಳ ಲಾಭ* *ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾಹಿತಿ*
*5183 ಕೋಟಿ ಠೇವಣಿ ಸಂಗ್ರಹ – ಮೂರು ರಾಜ್ಯಗಳಲ್ಲಿ 233 ಶಾಖೆಗಳು*
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳವಣಿಗೆ ಕಂಡಿರುವ ಜೊಲ್ಲೆ ಗ್ರೂಪ್ ಅಂಗಸಂಸ್ಥೆಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ (ಮಲ್ಟಿ ಸ್ಟೇಟ್) ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 5183 ಕೋಟಿ ರೂ. ಠೇವಣಿ ಸಂಗ್ರಹಿಸಿ 51.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಒಟ್ಟು 233 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಭಾರತದಲ್ಲೇ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಸಂಸ್ಥೆಯು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದ ಉತ್ತಮ ಸಾಧನೆ ಮಾಡುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 4.45 ಲಕ್ಷ ಸದಸ್ಯರಿದ್ದು, 37.21 ಕೋಟಿ ರೂ. ಷೇರು ಬಂಡವಾಳ, 244.25 ಕೋಟಿ ರೂ. ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, 5183.08 ಕೋಟಿ ರೂ. ಠೇವಣಿ, 3838.84 ಕೋಟಿ ರೂ. ಸಾಲ ಮತ್ತು ಮುಂಗಡಗಳು, 1487.90 ಕೋಟಿ ರೂ. ಬ್ಯಾಂಕ್ ಬ್ಯಾಲನ್ಸ್ ಮತ್ತು ಹೂಡಿಕೆ, 5839.26 ಕೋಟಿ ರೂ. ವರ್ಕಿಂಗ್ ಕ್ಯಾಪಿಟಲ್ ಹೊಂದಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಸಿದ್ರಾಮ ಗಡದೆ, ಯಾಸಿನ ತಾಂಬೋಳೆ, ಶ್ರೀನಿವಾಸ ಕರಾಳೆ, ನಿಂಗಪ್ಪ ಖೋಕಲೆ, ಕಾಶಿನಾಥ ಕಮತೆ, ಅಪ್ಪಾಸಾಹೇಬ ಚೌಗಲಾ, ದತ್ತಾತ್ರಯ ಪಾಟೀಲ, ಸದಾನಂದ ಹಲಿಂಗಳಿ, ಚೇತನ ದೇಶಪಾಂಡೆ, ಶ್ರೀನಿವಾಸ ಕರಾಳೆ, ವಿಭಾವರಿ ಖಾಂಡಕೆ, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ, ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಬಾರ, ಸುರೇಶ ಮಾನೆ, ಶಿವಪುತ್ರ ಡಬ್ಬ ಸೇರಿದಂತೆ ಇತರರು ಉಪಸ್ಥಿತರಿದ್ದರು.


