Kannada NewsPoliticsWorld

*ಇರಾನ್ ಮೇಲೆ ಅತೀ ದೊಡ್ಡ ದಾಳಿ ಮಾಡಿದ ಇಸ್ರೇಲ್: 250 ಕ್ಕೂ ಅಧಿಕ ಜನ ಸಾವು*

ಪ್ರಗತಿವಾಹಿನಿ ಸುದ್ದಿ: ಅಮೆರಿಕಾ ಇರಾನ್ ಜೊತೆ ಕದನ ವಿರಾಮ ಘೋಷಣೆ ಮಾಡಿದ್ರು ಇಸ್ರೇಲ್ ದಾಳಿ ಮಾಡುವದನ್ನು ಮಾತ್ರ ನಿಲ್ಲಿಸಿಲ್ಲ.  ಲೆಬನಾನ್‌ ಮೇಲೆ ಕೇವಲ 10 ನಿಮಿಷಗಳಲ್ಲಿ ಇಸ್ರೇಲ್‌  ವಾಯುಪಡೆ 100 ಕ್ಷಿಪಣಿ ದಾಳಿ ನಡೆಸಿದೆ. 

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿವುದು ವಿಶೇಷ. ಲೆಬನಾನ್ ಮೇಲಿನ ಕಾರ್ಯಾಚರಣೆಗೆ ಈ ಕದನ ವಿರಾಮ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಈ ದಾಳಿಯು ಯುದ್ಧದ ಅತ್ಯಂತ ದೊಡ್ಡ ಸಂಘಟಿತ ದಾಳಿ ಎಂದು ಇಸ್ರೇಲ್ ಬಣ್ಣಿಸಲಾಗಿದೆ. ರಾಜಧಾನಿ ಬೈರೂತ್ ಮಧ್ಯಭಾಗ, ಬೆಕಾ ವ್ಯಾಲಿ ಮತ್ತು ದಕ್ಷಿಣ ಲೆಬನಾನ್‌ನ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.

Home add -Advt

ಲೆಬನಾನ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಈ ಭೀಕರ ದಾಳಿಯಲ್ಲಿ ಕನಿಷ್ಠ 254 ಜನರು ಸಾವನ್ನಪ್ಪಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇಸ್ರೇಲ್‌ನ ದಾಳಿಗಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ಉಗ್ರ ಸಂಘಟನೆ ಕೂಡ ಉತ್ತರ ಇಸ್ರೇಲ್‌ನ ಸೇನಾ ನೆಲೆಗಳು ಮತ್ತು ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಸಂಘರ್ಷದಿಂದಾಗಿ ಲೆಬನಾನ್‌ನಲ್ಲಿ ಈವರೆಗೆ 1,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

Related Articles

Back to top button