ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸದಲಗಾದ ಅಗ್ನಿಶಾಮಕ ದಳದ ಸಿಬ್ಬಂದಿ ರಾಷ್ಟ್ರೀಯ ಮಟ್ಟದ ಫಾಯರ್ & ಇವ್ಯಾಕ್ಯೂಷನ್ ಡ್ರಿಲ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷಣ ಕಬಾಡೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಕಲ್ಲಪ್ಪಾ ಜಾಧವ ಮಾತನಾಡಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ವಿದ್ಯಾರ್ಥಿಗಳು ತಮ್ಮನ್ನು ತಾವು ಅವುಗಳಿಂದ ರಕ್ಷಿಸಿಕೊಳ್ಳಲು ಅನುಸರಿಸುವ ವಿಧಾನಗಳ ಕುರಿತು ತಿಳಿಸಿದರು.
ಅಗ್ನಿಶಾಮಕ ದಳದ ಠಾಣಾಧಿಕಾರಿಗಳಾದ ಹನುಮಂತ ನರಗುಂದ ಇವರು ವಿದ್ಯಾರ್ಥಿಗಳಿಗೆ ಅಗ್ನಿ ತಗುಲುವ ವಿವಿಧ ವಿಧಾನಗಳ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಎಸ್.ವಿಜಯಕುಮಾರ ಅವರು ಅಗ್ನಿಶಾಮಕ ದಳದ ಅಣುಕು ಪ್ರದರ್ಶನವನ್ನು ವಿದ್ಯಾರ್ಥಿ ಹಾಗೂ ತಮ್ಮ ಸಿಬ್ಬಂದಿಗಳಿಂದ ಪ್ರದರ್ಶಿಸಿದರು.
ಶ್ರೀ ಬಿರೇಶ್ವರ ೨ನೇಯ ಶಾಖೆಯ ಸದಸ್ಯರಾದ ಸದಾಶಿವ ಕಬಾಡೆ, ಯಕ್ಸಂಬಾದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗದವರು, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸೌ.ಎಸ್.ಜಿ.ಕಾಮತ, ಶಿಕ್ಷಕ/ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥತರಿದ್ದರು. ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವ್ಹಿ.ಆರ್.ಭಿವಸೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್.ಎ.ಚೌಗಲೆ ವಂದಿಸಿದರು. ಎಂ.ಎ.ಸನದಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ