Belagavi NewsBelgaum NewsKannada NewsKarnataka News

*ಸಮಾಜ ಸುಧಾರಣೆಗೆ ಶಂಕರಾಚಾರ್ಯರ ಕೊಡುಗೆ ಅಪಾರ: ವಿದ್ಯಾವತಿ ಭಜಂತ್ರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೀವನದ ಅಲ್ಪಾವಧಿಯಲ್ಲಿ ಇಡೀ ದೇಶ ಸಂಚರಿಸಿ ಅದೈತ ಸಿದ್ಧಾಂತ ಪ್ರತಿಷ್ಠಾಪಿಸಿದ ಶಂಕರಾಚಾರ್ಯರ ಜೀವನ ಇಂದಿನ ಪೀಳಿಗೆಗೆ ಆದರ್ಶವಾಗಿದ್ದು, ಇಂದಿನ ಯುವ ಪೀಳಿಗೆ ನಮ್ಮ ಪರಂಪರೆ ಸಂಸ್ಕಾರ ಧಾರ್ಮಿಕ ಜ್ಞಾನವನ್ನು ಉಳಿಸಲು ಇಂತಹ ಕಾರ್ಯಕ್ರಮಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಅವರು ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಮತ್ತು ಶಂಕರಾಚಾರ್ಯ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಏ. 21 (ಮಂಗಳವಾರ) ಗುರುಪ್ರಸಾದ ನಗರದ ದತ್ತ ಮಂದಿರದಲ್ಲಿ ಜರುಗಿದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಶಂಕರಾಚಾರ್ಯರು ಕೇವಲ ಆಚಾರ್ಯರಷ್ಟೇ ಅಲ್ಲದೆ, ಮಹಾನ್ ವಿದ್ವಾಂಸರು, ಕವಿಗಳು ಹಾಗೂ ಸಂಗೀತಗಾರರೂ ಆಗಿದ್ದರು. ಆತ್ಮ ಮತ್ತು ಪರಮಾತ್ಮ ಒಂದೇ ಎಂಬ ಅದೈತ ತತ್ವದ ಮೂಲಕ ಭೇದಭಾವಗಳನ್ನು ಮೀರಿದ ಆಧ್ಯಾತ್ಮಿಕ ಅರಿವು ಮೂಡಿಸಿದರು.

ಇಂದಿನ ಕಾಲದಲ್ಲಿ 25-30 ವರ್ಷಕ್ಕೆ ನಮ್ಮ ಜೀವನದ ದಿಕ್ಕೇನು ಎಂಬ ಗೊಂದಲದಲ್ಲಿ ನಾವಿರುತ್ತೇವೆ. ಆದರೆ ಶಂಕರಾಚಾರ್ಯರು ಆ ವಯಸ್ಸಿನಲ್ಲೇ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದರು. ಶೃಂಗೇರಿ, ಪುರಿ, ಬದರಿನಾಥ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಾಂಸ್ಕೃತಿಕ ಏಕತೆಯನ್ನು ತಂದರು ಎಂದರು.

Home add -Advt

ಸರ್ಕಾರದ ವತಿಯಿಂದ ಇಂತಹ ಮಹಾಪುರುಷರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ಆದರ್ಶಗಳನ್ನು ಸಾರ್ವಜನಿಕರಿಗೆ ತಲುಪಿಸುವುದಾಗಿದೆ. ಶಂಕರಾಚಾರ್ಯರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಚಿದಾನಂದ ಮುನವಳ್ಳಿ ಅವರು ಮಾತನಾಡಿ ಅನಂತ ಜ್ಞಾನಿಗಳಿಗೆ ಭಾರತಾಂಬೆ ಜನ್ಮ ನೀಡಿದ್ದಾಳೆ. ಶ್ರೀ ಶಂಕರರು 32 ವಯಸ್ಸಿನಲ್ಲಿಯೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಹೀಗೆ ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪಿಸಿದರು.

ಹೆಚ್ಚಿನ ಜ್ಞಾನಕ್ಕಾಗಿ ಗುರುಗಳನ್ನು ಹುಡುಕುತ್ತಾ ಹೊರಟ ಅವರು ಲೌಕಿಕ ಜ್ಞಾನದ ಕಡೆ ಹೆಚ್ಚಿನ ಒಲವು ತೋರಿದರು. ಶಂಕರಾಚಾರ್ಯರು ಕೇವಲ ಜ್ಞಾನಿಗಳಲ್ಲದೇ ಸಮಾಜ ಸುಧಾರಣೆಗಾಗಿ ಕ್ರಾಂತಿಕಾರಿಯೂ ಸಹ ಆಗಿದ್ದರು.

ಶ್ರೀ ಶಂಕರರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಹಂ ಬ್ರಹ್ಮಾಸ್ಮಿ ತತ್ವವನ್ನು ಸಾರುವ ಮೂಲಕ ಜೀವನದಲ್ಲಿ ಕಷ್ಟ-ಸುಖ, ಜನನ-ಮರಣ ಸಾಮಾನ್ಯ ಎಂದು ಶ್ರೀ ಶಂಕರಾಚಾರ್ಯರು ಸಾರಿದರು ಎಂದು ತಿಳಿಸಿದರು.

Related Articles

Back to top button