Belagavi NewsBelgaum NewsKannada NewsKarnataka NewsNationalPolitics

*”ಮಿಷನ್ ಬೆಳಗಾವಿ” ಗ್ರಂಥಾಲಯ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ಅನುದಾನಲ್ಲಿ ನಿರ್ಮಿಸಲಾಗಿದ್ದ ಮಿಷನ್ ಬೆಳಗಾವಿ ಗ್ರಂಥಾಲಯ ಉದ್ಘಾಟನೆ ನಡೆಸಲಾಯಿತು. 

ಸುಭಾಷ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಿರ್ಮಿಸಿದ್ದ ಹೈಟೆಕ್ ಗ್ರಂಥಾಲಯ ಉದ್ಘಾಟಿಸಲಾಯಿತು. 

Home add -Advt

ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಆಸೀಪ್ ಸೇಠ್ ಅವರ ಶಾಸಕರ 30 ಲಕ್ಷ ರೂಪಾಯಿ ಅನುದಾನದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗಿದೆ. ವಸತಿ ನಿಲಯದ ಆವರಣದಲ್ಲಿ ಖಾಲಿ ಇದ್ದ ನಾಲ್ಕು ಕೊಠಡಿಗಳಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ. ಗ್ರಂಥಾಲಯದಲ್ಲಿ ಒಂದೇ ಸಮಯದಲ್ಲಿ 300 ವಿದ್ಯಾರ್ಥಿಗಳು ಏಕಕಾಲದಲ್ಲಿ ಓದಲು ಆಸನಗಳ ವ್ಯವಸ್ಥೆ, ಸ್ಪರ್ಧಾತ್ಮಕ  ಪುಸ್ತಕಗಳ ವ್ಯವಸ್ಥೆ ಕಲ್ಪಿಸಲಾಗಿದೆ. 

ಗ್ರಂಥಾಲಯವನ್ನು ಶಾಸಕ ಆಸೀಪ್ ಸೇಠ್, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂಧೆ, ಹಿಂದೂಳಿದ ವರ್ಗಗಳ ಕಲ್ಯಾಣಾಧಿಕಾರಿ ಹರ್ಷ, ತಾಲೂಕು ಕಲ್ಯಾಣಾಧಿಕಾರಿ ಶಾಂತ ಸೇರಿದಂತೆ ಮತ್ತಿತರರು ಉದ್ಘಾಟಿಸಿದರು.


https://pragativahini.com/5-day-dharmachakra-aradhana-mahotsav-celebration-at-kamal-basadi-sanjay-patil/

Related Articles

Back to top button