ಆರೋಪಿ ಆದಿತ್ಯ ರಾವ್ 10 ದಿನ ಪೊಲೀಸ್ ಕಸ್ಟಡಿಗೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್‍ನನ್ನು 10 ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ವಹಿಸಿ 6ನೇ ಜೆ ಎಂ ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷಾ ನೇತೃತ್ವದಲ್ಲಿ ಆರೋಪಿ ಆದಿತ್ಯ ರಾವ್ ನನ್ನು ತಡಾರಾತ್ರಿವರೆಗೆ ವಿಚಾರಣೆ ನಡೆಸಲಾಗಿದ್ದು, ಬಳಿಕ್ ಜೆಎಮ್‍ಎಫ್‍ಸಿ 6ನೇ ಕೋರ್ಟ್ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ 15 ದಿನ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದರು.

ಆದಿತ್ಯ ರಾವ್ ಕೋರ್ಟ್ ವಿಚಾರಣೆ ವೇಳೆ ಯಾವುದೇ ಭಾವನೆ ವ್ಯಕ್ತಪಡಿಸದೆ, ಕೈಕಟ್ಟಿ ತಲೆ ತಲೆ ಬಗ್ಗಿಸಿ ನಿಂತಿದ್ದ. ಬಳಿಕ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಧೀಶರು, ಆರೋಗ್ಯ ಸರಿ ಇದೆಯಾ ಎಂದು ಆದಿತ್ಯ ರಾವ್‍ ನನ್ನ ಕೇಳಿದರು. ಆಗ ಆರೋಪಿಯು ಸರಿ ಇದೆ ಎಂದು ಉತ್ತರಿಸಿದ. ಆಗ ನ್ಯಾಯಾಧೀಶರು ಏನಾದರೂ ಹೇಳಲಿಕ್ಕೆ ಇದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆರೋಪಿ ಏನು ಇಲ್ಲ ಸರ್. ನಾನು ಮಾಡಿದ್ದೆಲ್ಲಾ ತಪ್ಪು ಎಂದು ಒಪ್ಪಿಕೊಂಡಿದ್ದಾನೆ.

ಸರ್ಕಾರದ ಪರ ಸರ್ಕಾರಿ ವಕೀಲ ನಾರಾಯಣ ಹರಿ ವಕಾಲತು ವಹಿಸಿದ್ದಾರೆ. ಹೀಗಾಗಿ ನಿನ್ನ ಪರ ಯಾರಾದರು ವಕಾಲತ್ತು ವಹಿಸ್ತಾರಾ ಎಂದು ನ್ಯಾಯಾಧೀಶರು ಆರೋಪಿಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಆರೋಪಿ, ಯಾರೂ ಇಲ್ಲ ಎಂದು ತಿಳಿಸಿದ್ದಾನೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button