Belagavi NewsBelgaum NewsKarnataka NewsLatestPolitics

*ನಮ್ಮದು ಜನಪರ ಸರಕಾರ ಎನ್ನುವುದಕ್ಕೆ ಫಲಿತಾಂಶ ಸಾಕ್ಷಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಕೇವಲ ಘೋಷಣೆಗಳಲ್ಲ, ಜನರ ದಿನನಿತ್ಯದ ಬದುಕಿಗೆ ನಿಜವಾದ ಬೆಂಬಲವಾಗಿ ಪರಿಣಮಿಸಿವೆ. ಜನರ ಕಷ್ಟ, ನೋವು, ಅಗತ್ಯಗಳಿಗೆ ಸ್ಪಂದಿಸಿದ ನಮ್ಮ ಸರ್ಕಾರಕ್ಕೆ ಜನರು ಇದೀಗ ಉಪಚುನಾವಣೆ ಫಲಿತಾಂಶಗಳ ಮೂಲಕ ಸ್ಪಷ್ಟವಾದ ಮನ್ನಣೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಜನರು ನಮ್ಮ ಜನಪರ ಆಡಳಿತವನ್ನು ಸ್ವೀಕರಿಸಿರುವುದಕ್ಕೆ ಸ್ಪಷ್ಟ ಉದಾಹರಣೆ. ಇದು ಕೇವಲ ರಾಜಕೀಯ ಗೆಲುವಲ್ಲ, ಜನ ವಿಶ್ವಾಸದ ಗೆಲುವಾಗಿದೆ ಎಂದಿದ್ದಾರೆ.

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆಮನೆಗೂ ತಲುಪಿ, ಮಹಿಳೆಯರು, ಯುವಕರು, ಬಡವರು, ರೈತರು ಸೇರಿದಂತೆ ಪ್ರತಿಯೊಂದು ವರ್ಗದ ಜನರಿಗೆ ಸಹಾಯವಾಗಿವೆ. ಇದೇ ಕಾರಣಕ್ಕೆ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಬಿಜೆಪಿಯ ವಿರುದ್ಧ ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ. ಸುಳ್ಳು ಪ್ರಚಾರ ಮತ್ತು ಜನವಿರೋಧಿ ನೀತಿಗಳಿಗೆ ಕರ್ನಾಟಕದ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.

Home add -Advt

ಇದು ನಮ್ಮ ಸರ್ಕಾರದ ಕೆಲಸಕ್ಕೆ ಸಿಕ್ಕಿರುವ ಜನರ ಸರ್ಟಿಫಿಕೇಟ್. ಮುಂದೆಯೂ ಇದೇ ರೀತಿಯಾಗಿ ಜನಪರ ಯೋಜನೆಗಳನ್ನು ಇನ್ನಷ್ಟು ಬಲಪಡಿಸಿ, ಜನರ ವಿಶ್ವಾಸವನ್ನು ಉಳಿಸಿಕೊಂಡು ಸಾಗುವುದು ನಮ್ಮ ಬದ್ಧತೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

Related Articles

Back to top button