Belagavi NewsBelgaum NewsCrimeKannada NewsKarnataka NewsLatestNationalPolitics
*ಟ್ರ್ಯಾಕ್ಟರ್ನಿಂದ ಬಿದ್ದ ಬಾಲಕ ಚಕ್ರದಡಿ ಸಿಲುಕಿ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟ್ರ್ಯಾಕ್ಟರ್ ಇಂಜಿನ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಬಾಲಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಮಾಸ್ತಮರಡಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಇಂಜಿನ್ ಗೆ ನೇಗಿಲು ಜೋಡಣೆ ಮಾಡಿಕೊಂಡು ಬರುವಾಗ ಇಂಜಿನಲ್ಲಿ ಕುಳಿತಿದ್ದ ಬಾಲಕ ಟ್ರ್ಯಾಕ್ಟರ್ ಕಳಗೆ ಬಿದ್ದು ಚಕ್ರಕ್ಕೆ ಸಿಲುಕಿ ಮನೋಜ ಬಸವರಾಜ ಮಿಚಿಡೊಳ್ಳಿ (13) ಎಂಬಾತ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ನೇಸರಗಿ ಪೊಲೀಸ್ ಠಾಣೆ ಗುನ್ನಾ ನಂ : 59/2026 ಕಲಂ : 281, 106(1) ಬಿ.ಎನ್.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



