CrimeKannada NewsLatestNational

*ಸ್ಲೀಪರ್ ಬಸ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಸ್ಲೀಪರ್ ಬಸ್ ನಲ್ಲಿ ಚಾಲಕ ಹಾಗೂ ನಿರ್ವಾಹಕ ಸೇರಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯ ಘಟನೆ ನಡೆದಿದೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಕಾರ್ಖಾನೆಯ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸರಸ್ವತಿ ವಿಹಾರ್ ನ ಬಿ ಬ್ಲಾಕ್ ಬಳಿ ಬಸ್ ನಿಲ್ದಾಣದ ಬಳಿ ಬಸ್ ನ ಬಾಗಿಲು ಬಳಿ ನಿಂತಿದ್ದ ಆರೋಪಿಯೊಬ್ಬನ ಬಳಿ ಮಹಿಳೆ ಸಮಯ ಕೇಳಿದ್ದರು. ಈ ವೇಳೆ ಆರೋಪಿ ಮಹಿಳೆಯನ್ನು ಬಲವಂತವಾಗಿ ಬಸ್ ಒಳಗೆ ಎಳೆದೊಯ್ದು ಅತ್ಯಚಾರವೆಸಗಿದ್ದಾನೆ. ನಿರ್ವಾಹಕ ಕೂಡ ಇದೇ ಕೃತ್ಯವೆಸಗಿದ್ದಾನೆ.

ಮಹಿಳೆ ರಾಣಿ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂತ್ರಸ್ತೆ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

Related Articles

Back to top button