Kannada NewsKarnataka NewsNational

*ಸಿಎನ್‌ಜಿ ದರ ಮತ್ತೆ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಸಿಎನ್‌ಜಿ ದರ ಮತ್ತೆ ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್  ಸಂಸ್ಥೆಯು ಮುಂಬೈನಲ್ಲಿ ಇಂದಿನ ಅನ್ವಯವಾಗುವಂತೆ ಹೊಸ ದರ ಘೋಷಿಸಿದೆ.

ಪರಿಷ್ಕೃತ ದರದಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದ್ದು, 86 ರೂ.ಗಳಿಗೆ ಏರಿಕೆಯಾಗಿದೆ. ಇನ್ನೂ ಗೃಹ ಬಳಕೆಯ ಪಿಎನ್‌ಜಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 50 ಪೈಸೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.

ಸದ್ಯ ಈಗಿನ ಪರಿಷ್ಕೃತ ದರವು ಮುಂಬೈ, ಥಾಣೆ, ನವಿ ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಇತರ ಭಾಗಗಳಿಗೆ ಅನ್ವಯವಾಗಲಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್ ಕಲ್ಯಾಣ್, ರಾಯಗಢ, ರತ್ನಗಿರಿ, ಲಾತೂರ್, ಉಸ್ಮಾನಾಬಾದ್, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ಹಲವಾರು ನಗರಗಳಿಗೆ ಅನಿಲ ಪೂರೈಸುತ್ತದೆ.

ಕಳೆದ ಕೆಲ ದಿನಗಳಲ್ಲಿ ಮುಂಬೈನಲ್ಲಿ ಮಾತ್ರವೇ 2ನೇ ಬಾರಿಗೆ ಮಾಡಿದ ದರ ಏರಿಕೆ ಇದಾಗಿದೆ. ಮೇ 26 ರಂದು ದೆಹಲಿಯಲ್ಲೂ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ಮುಂಬೈ ವ್ಯಾಪ್ತಿಯಲ್ಲಿ ಮೇ 14 ರಂದು 2 ರೂ. ಹೆಚ್ಚಳ ಮಾಡಲಾಗಿತ್ತು.

Home add -Advt

Related Articles

Back to top button