Karnataka NewsLatestPolitics
*ಹೆಚ್ಚವರಿ ಡಿಸಿಎಂ ಹುದ್ದೆಗೆ ಹೈಕಮಾಂಡ್ ನಕಾರ: ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ನಾಲ್ಕು ಡಿಸಿಎಂ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆದಿತ್ತು. ಆದರೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಕಾಂಗ್ರೆಸ್ ಹೈಕಮಾಂಡ್ ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಒಂದೇ ಡಿಸಿಎಂ ಹುದ್ದೆಗೆ ಹೈಕಮಾಂಡ್ ಒಪ್ಪಿದ್ದು, ಡಾ.ಜಿ.ಪರಮೇಶ್ವರ್ ಡಿ.ಕೆ.ಶಿವಕುಮಾರ್ ಸರ್ಕಾರದ ಏಕೈಕ ಡಿಸಿಎಂ ಆಗಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಲೋಕಭವನದಲ್ಲಿ ನಡೆಯುವ ಪರ್ಮಾಣವಚನ ಸಮಾರಂಭದಲ್ಲಿ ಪರಮೇಶ್ವರ್ ಕೂಡ ಪದಗ್ರಹಣ ಮಾಡಲಿದ್ದಾರೆ.
ಪರಮೇಶ್ವರ್ ಅವರ ಹಿರಿತನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಹೈಕಮಾಂಡ್ ನಾಯಕರು ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಲು ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ.




