Kannada NewsLatestWorld

*BREAKING: ವೆನೆಜುವೆಲಾದಲ್ಲಿ ಭೀಕರ ಸರಣಿ ಭೂಕಂಪ: ಕಟ್ಟಡಗಳು ನೆಲಸಮ; 1 ಲಕ್ಷ ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ವೆನೆಜುವೆಲಾದಲ್ಲಿ ಪ್ರಬಲ ಸರಣಿ ಭೂಕಂಪ ಸಂಭವಿಸಿದೆ. ಕಟ್ಟಡಗಳು ನೆಲಸಮವಾಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭೂಕಂಪದಿಂದ 10 ಸಾವಿರದಿಂದ 1 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವೆನೆಜುವೆಲಾದಲ್ಲಿ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಎರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ಕ್ಷಣಾರ್ಧದಲ್ಲಿ ಶಾಪಿಂಗ್ ಮಾಲ್ ಗಳು, ಮನೆಗಳು, ಬೃಹತ್ ಕಟ್ಟಡಗಳು ಸಂಪೂರ್ಣ ನೆಲಸಮವಾಗಿದ್ದು, ರಸ್ತೆಗಳು ಬೃಹತ್ ಗಾತ್ರದಲ್ಲಿ ಬಿರುಕುಬಿಟ್ಟಿವೆ. ಜೀವ ಉಳಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಕಟ್ಟಡಗಳ ಅವಸೇಷಗಳ ಅಡಿ ಸಿಲುಕಿ ಜನರು ಸಾವನ್ನಪ್ಪಿದ್ದಾರೆ.

ರಿಕ್ಟರ್ ಮಾಪಕದಲ್ಲಿ 7.1 ಹಾಗೂ 7.5ರಷ್ಟು ತೀವ್ರತೆ ದಾಖಲಾಗಿದೆ. ಅಮೆರಿಕಾದ ಜಿಯಾಲೋಜಿಕಲ್ ಸರ್ವೆ ಪ್ರಕಾರ 25 ಕಿ.ಮೀ ವ್ಯಾಪ್ತಿವರೆಗೂ ಭೂಕಂಪನದ ಎಫೆಕ್ಟ್ ಕಂಡುಬಂದಿದ್ದು, 10 ಸಾವಿರದಿಂದ 1 ಲಕ್ಷದ ಜನ ಸಾವನ್ನಪ್ಪಿದ್ದಾರೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಮೇಲೇಳುತ್ತಿದ್ದು, ವೆನೆಜುವೆಲಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Home add -Advt

Related Articles

Back to top button