Kannada NewsKarnataka NewsLatest

*ಕರ್ನಾಟಕದಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ*

ಕರ್ನಾಟಕದಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (Artificial Intelligence – AI) ಕ್ಷೇತ್ರದ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ದೇಶದ ಮೊದಲ ಸರ್ಕಾರಿ ಪ್ರೇರಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಮಂಗಳವಾರ ಬೆಂಗಳೂರಿನ ಬಿಐಇಸಿ (BIEC)ನಲ್ಲಿ ನಡೆದ ಗೂಗಲ್ I/O ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಐ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಹಾಗೂ ಪ್ರತಿಭೆಗಳ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಎಐ ಹಬ್ (AI Hub) ಅನ್ನು ಕೂಡ ಸ್ಥಾಪಿಸಲಿದೆ ಎಂದು ತಿಳಿಸಿದರು. ಈ ಕೇಂದ್ರವು ಸ್ಟಾರ್ಟ್‌ಅಪ್‌ಗಳು, ಕಂಪನಿಗಳು ಹಾಗೂ ಸಂಶೋಧಕರಿಗೆ ಇನ್ಕ್ಯುಬೇಷನ್ ಮತ್ತು ಸಂಶೋಧನಾ ವೇದಿಕೆಯಾಗಲಿದೆ ಎಂದರು.
ತಂತ್ರಜ್ಞಾನ ಕ್ಷೇತ್ರದ ನಾಯಕರು, ಉದ್ಯಮಿಗಳು, ಸಂಶೋಧಕರು, ಡೆವಲಪರ್‌ಗಳು ಮತ್ತು ನೀತಿ ರೂಪಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಕೃತಕ ಬುದ್ಧಿಮತ್ತೆ ಇಂದಿನ ಪೀಳಿಗೆಯ ಅತ್ಯಂತ ಮಹತ್ವದ ತಾಂತ್ರಿಕ ಕ್ರಾಂತಿಯಾಗಿದೆ. ಉಗಿ ಯಂತ್ರ, ವಿದ್ಯುತ್, ಇಂಟರ್ನೆಟ್ ಮತ್ತು ಮೊಬೈಲ್ ತಂತ್ರಜ್ಞಾನಗಳು ಹೇಗೆ ಜಗತ್ತನ್ನು ಬದಲಿಸಿವೆಯೋ, ಅದೇ ರೀತಿ ಎಐ ಕೂಡ ಹೊಸ ಯುಗವನ್ನು ರೂಪಿಸುತ್ತಿದೆ” ಎಂದು ಹೇಳಿದರು.
“ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿಯಷ್ಟೇ ಅಲ್ಲ, ವಿಶ್ವದ ಅತ್ಯಂತ ಚೈತನ್ಯಶೀಲ ನಾವೀನ್ಯತಾ ಕೇಂದ್ರಗಳಲ್ಲಿ ಒಂದಾಗಿದೆ. ಕರ್ನಾಟಕವನ್ನು ಜವಾಬ್ದಾರಿಯುತ ಎಐ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳಿದರು.
ಎಐ-ನೇಟಿವ್ ರಾಜ್ಯವಾಗುವ ಗುರಿ
ರಾಜ್ಯದ ಮೊದಲ ಗುರಿ ಕರ್ನಾಟಕವನ್ನು ಎಐ-ನೇಟಿವ್ ರಾಜ್ಯವನ್ನಾಗಿ ರೂಪಿಸುವುದಾಗಿದೆ ಎಂದು ಹೇಳಿದ ಮುಖ್ಯಮಂತ್ರಿ, ಎಐ ತಂತ್ರಜ್ಞಾನವು ಕೇವಲ ಘೋಷಣೆಯಾಗಿ ಉಳಿಯದೆ ಜನರ ಜೀವನಮಟ್ಟ ಸುಧಾರಿಸಲು ಬಳಕೆಯಾಗಬೇಕು ಎಂದು ಒತ್ತಿ ಹೇಳಿದರು.
“ಎಐ ತಂತ್ರಜ್ಞಾನ ಶಿಕ್ಷಕರಿಗೆ ಉತ್ತಮ ಬೋಧನೆ ಮಾಡಲು, ವೈದ್ಯರಿಗೆ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು, ರೈತರಿಗೆ ಪರಿಣಾಮಕಾರಿ ಸಲಹೆಗಳನ್ನು ನೀಡಲು, ನಾಗರಿಕರಿಗೆ ವೇಗವಾಗಿ ಮತ್ತು ಗೌರವಯುತವಾಗಿ ಸರ್ಕಾರಿ ಸೇವೆಗಳನ್ನು ಒದಗಿಸಲು ಹಾಗೂ ಸಣ್ಣ ಉದ್ಯಮಗಳಿಗೆ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸಲು ನೆರವಾಗಬೇಕು” ಎಂದು ಅವರು ತಿಳಿಸಿದರು.
ಕರ್ನಾಟಕದ ತಂತ್ರಜ್ಞಾನ ಶಕ್ತಿ
ಪ್ರಸ್ತುತ ಕರ್ನಾಟಕವು ಭಾರತದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ಸುಮಾರು 40 ಪ್ರತಿಶತ ಕೊಡುಗೆ ನೀಡುತ್ತಿದೆ. ಬೆಂಗಳೂರಿನಲ್ಲಿ 17,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ ಜಾಗತಿಕ ಮಾರುಕಟ್ಟೆಗಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಸಾವಿರಾರು ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳು (GCCs) ಕಾರ್ಯನಿರ್ವಹಿಸುತ್ತಿವೆ ಎಂದು ಸಿಎಂ ಹೇಳಿದರು.
ಡಿಜಿಟಲ್ ಮೂಲಸೌಕರ್ಯಕ್ಕೆ ಒತ್ತು
ಎಐ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಮುಂದಿನ ತಲೆಮಾರಿನ ಡಿಜಿಟಲ್ ಸೇವೆಗಳಿಗೆ ಅಗತ್ಯವಾದ ಡೇಟಾ ಸೆಂಟರ್‌ಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳ ವಿಸ್ತರಣೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಅವರು ತಿಳಿಸಿದರು. ಎಐ ಸಂಶೋಧನೆ, ಹೈಪರ್‌ಸ್ಕೇಲ್ ಕಂಪ್ಯೂಟಿಂಗ್ ಹಾಗೂ ಜಿಸಿಸಿಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಗೂಗಲ್‌ಗೆ ಸಹಭಾಗಿತ್ವದ ಆಹ್ವಾನ
ಕಳೆದ ಎರಡು ದಶಕಗಳಿಂದ ಗೂಗಲ್ ಬೆಂಗಳೂರು ನಗರವನ್ನು ತನ್ನ ಪ್ರಮುಖ ಜಾಗತಿಕ ಎಂಜಿನಿಯರಿಂಗ್, ಸಂಶೋಧನೆ ಮತ್ತು ನಾವೀನ್ಯತಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿರುವುದನ್ನು ಸ್ಮರಿಸಿದ ಸಿಎಂ, ಶಿಕ್ಷಣ, ಆರೋಗ್ಯ, ಕೃಷಿ, ಹವಾಮಾನ ಸ್ಥೈರ್ಯ, ನಗರ ಸಂಚಾರ ಮತ್ತು ಆಡಳಿತ ಕ್ಷೇತ್ರಗಳಿಗೆ ಎಐ ಆಧಾರಿತ ಪರಿಹಾರಗಳನ್ನು ರೂಪಿಸಲು ಕರ್ನಾಟಕದೊಂದಿಗೆ ಇನ್ನಷ್ಟು ಆಳವಾದ ಸಹಭಾಗಿತ್ವ ಬೆಳೆಸುವಂತೆ ಗೂಗಲ್‌ಗೆ ಆಹ್ವಾನ ನೀಡಿದರು.
ಗೂಗಲ್ ಜೊತೆ ಐದು ಪ್ರಮುಖ ಸಹಯೋಗ ಕ್ಷೇತ್ರಗಳು
ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಸಣ್ಣ ಉದ್ಯಮಗಳಿಗೆ ಎಐ ಆಧಾರಿತ ಪರಿಹಾರಗಳ ಅಭಿವೃದ್ಧಿ.
ಭಾರತದ ಸವಾಲುಗಳಿಗೆ ಪರಿಹಾರ ಒದಗಿಸುವ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ.
ವಿದ್ಯಾರ್ಥಿಗಳಿಗೆ ಹೆಚ್ಚಿನ ಎಐ ಶಿಕ್ಷಣ ಮತ್ತು ತರಬೇತಿ ಅವಕಾಶಗಳ ಸೃಷ್ಟಿ.
ಕರ್ನಾಟಕವನ್ನು ಜವಾಬ್ದಾರಿಯುತ ತಂತ್ರಜ್ಞಾನದ ಜಾಗತಿಕ ಪ್ರಯೋಗಾಲಯವನ್ನಾಗಿ ರೂಪಿಸುವುದು.
ಕರ್ನಾಟಕದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಗೂಗಲ್‌ನ ದೀರ್ಘಕಾಲೀನ ಹೂಡಿಕೆ ಮತ್ತು ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದು.
“ಹೊಸ ಆಲೋಚನೆಗಳು, ಕುತೂಹಲ ಮತ್ತು ವಿಭಿನ್ನವಾಗಿ ಯೋಚಿಸುವ ಮನೋಭಾವವೇ ತಾಂತ್ರಿಕ ಕ್ರಾಂತಿಗಳಿಗೆ ಕಾರಣವಾಗಿವೆ. ಡೆವಲಪರ್‌ಗಳು ಧೈರ್ಯದಿಂದ ನಿರ್ಮಿಸಲಿ, ಉದ್ಯಮಿಗಳು ದೊಡ್ಡ ಕನಸು ಕಾಣಲಿ, ಸಂಶೋಧಕರು ಹೊಸ ಆವಿಷ್ಕಾರಗಳನ್ನು ಮುಂದುವರಿಸಲಿ, ವಿದ್ಯಾರ್ಥಿಗಳು ಕಲಿಕೆಯನ್ನು ಎಂದಿಗೂ ನಿಲ್ಲಿಸಬಾರದು” ಎಂದು ಕರೆ ನೀಡಿದ ಮುಖ್ಯಮಂತ್ರಿ, ಕರ್ನಾಟಕವು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಡಿ ಕೆ ಶಿವಕುಮಾರ್

ಜವಾಬ್ದಾರಿಯುತ AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ

ಎಐ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಪರಿವರ್ತನೆ

Home add -Advt

ಗೂಗಲ್ ಅತ್ಯದ್ಭುತ ಪಾಲುದಾರ

ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಕರ್ನಾಟಕವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ರೂಪಿಸುವುದು ಮತ್ತು ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸುವುದು. ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಸಹಯೋಗವನ್ನು ಬೆಳೆಸಲು ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು” ಎಂದು ಹೇಳಿದರು.

“ಎಐ-ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ, ರೈತರಿಗೆ ಎಐ-ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರ, ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು, ಎಐ ಪರಿಕರಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ಯಮಗಳಲ್ಲಿ ಬದಲಾವಣೆ ತರಲಾಗುವುದು” ಎಂದು ತಿಳಿಸಿದರು.

ತಂತ್ರಜ್ಞಾನ ಬೆಂಗಳೂರಿನ ದೈನಂದಿನ ಭಾಗ

“ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ರೋಮಾಂಚಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸಲು ನಾನು ಅತ್ಯಂತ ಹೆಮ್ಮೆಪಡುತ್ತೇನೆ. ಇಂತಹ ಒಂದು ಕಾರ್ಯಕ್ರಮವು ಇಷ್ಟು ಸಹಜವಾಗಿ ಮೂಡಿಬರಲು ವಿಶ್ವದಲ್ಲೇ ಕೆಲವೇ ಕೆಲವು ಸ್ಥಳಗಳಿವೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಎಂಬುದು ದೈನಂದಿನ ಜೀವನದ ಭಾಗವಾಗಿದೆ” ಎಂದರು.

“ಪ್ರತಿ ಪೀಳಿಗೆಯೂ ಮಾನವ ನಾಗರಿಕತೆಯ ಹಾದಿಯನ್ನೇ ಬದಲಾಯಿಸುವ ಒಂದು ತಂತ್ರಜ್ಞಾನವನ್ನು ಬಳುವಳಿಯಾಗಿ ಪಡೆಯುತ್ತದೆ. ಸ್ಟೀಮ್ ಇಂಜಿನ್ ಕೈಗಾರಿಕಾ ರಂಗವನ್ನು ಕ್ರಾಂತಿಗೊಳಿಸಿತು. ವಿದ್ಯುತ್ ನಗರಗಳನ್ನು ಮಾರ್ಪಡಿಸಿತು. ಇಂಟರ್ನೆಟ್ ಸಂಪರ್ಕ ಮಾಧ್ಯಮವನ್ನೇ ಬದಲಾಯಿಸಿತು. ಮೊಬೈಲ್ ತಂತ್ರಜ್ಞಾನವು ಎಲ್ಲವನ್ನೂ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಇಂದು, ಕೃತಕ ಬುದ್ಧಿಮತ್ತೆಯು (AI) ಸ್ವತಃ ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ. ನಾನು ಹೋದಲ್ಲೆಲ್ಲಾ ಜನರು ಕೇವಲ ಮತ್ತೊಂದು ತಂತ್ರಜ್ಞಾನವಾಗಿ ಮಾತ್ರವಲ್ಲದೆ, ಬಹುಶಃ ನಮ್ಮ ಪೀಳಿಗೆಯನ್ನು ವ್ಯಾಖ್ಯಾನಿಸುವ ಪ್ರಮುಖ ಶಕ್ತಿಯಾಗಿ AI ಬಗ್ಗೆ ಮಾತನಾಡುತ್ತಾರೆ” ಎಂದರು.

“ಕರ್ನಾಟಕದ ಮುಖ್ಯಮಂತ್ರಿಯಾಗಿ, ನಾನು ನಿಮ್ಮ ಮುಂದೆ ಅಪಾರ ಹೆಮ್ಮೆಯಿಂದ ನಿಂತಿದ್ದೇನೆ. ಏಕೆಂದರೆ ಅಂತಹ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತಿರುವ ಪ್ರಮುಖ ಸ್ಥಳಗಳಲ್ಲಿ ನಮ್ಮ ಸ್ವಂತ ರಾಜ್ಯವೂ ಒಂದಾಗಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನವು ಕೇವಲ ಕಚೇರಿ ಕಟ್ಟಡಗಳಿಗೆ ಸೀಮಿತವಾಗಿಲ್ಲ. ಇದು ಕಾಫಿ ಶಾಪ್‌ಗಳ ಸಂಭಾಷಣೆಗಳಲ್ಲಿ, ನಮ್ಮ ತರಗತಿ ಕೋಣೆಗಳಲ್ಲಿ ಮತ್ತು ಸಂಶೋಧನಾ ಪ್ರಯೋಗಾಲಯಗಳಲ್ಲಿ ಪ್ರಾರಂಭವಾಗುತ್ತದೆ. ಮುಂದೆ ಅದು ಒಂದು ನವೋದ್ಯಮವಾಗಿ ರೂಪುಗೊಳ್ಳುತ್ತದೆ. ಕೆಲವು ಬಾರಿ ಯುನಿಕಾರ್ನ್ (ಪ್ರತಿಷ್ಠಿತ ಕಂಪನಿ) ಆಗುತ್ತದೆ ಮತ್ತು ಅಪರೂಪಕ್ಕೆ ಇಡೀ ಪ್ರಪಂಚವನ್ನೇ ಬದಲಾಯಿಸುತ್ತದೆ. ಇದು ಬೆಂಗಳೂರಿನ ಮನೋಭಾವ ಮತ್ತು ಇದು ಕರ್ನಾಟಕದ ಚೈತನ್ಯ” ಎಂದು ಬಣ್ಣಿಸಿದರು.

“ಒಂದು ಆಲೋಚನೆಯನ್ನು ತೆಗೆದುಕೊಳ್ಳಿ. ಆ ಒಂದು ಆಲೋಚನೆಯನ್ನೇ ನಿಮ್ಮ ಜೀವನವಾಗಿಸಿಕೊಳ್ಳಿ” ಎಂದು ಸ್ವಾಮಿ ವಿವೇಕಾನಂದರು ನಮಗೆ ಸಂದೇಶವನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಆ ಆಲೋಚನೆ ಅತ್ಯಂತ ಸ್ಪಷ್ಟವಾಗಿದೆ. ಇಂದು ನಮ್ಮ ರಾಜ್ಯವು ಭಾರತದ ಸಾಫ್ಟ್‌ವೇರ್ ರಫ್ತಿನ 40% ರಷ್ಟು ಕೊಡುಗೆ ನೀಡುತ್ತಿದೆ. ಬೆಂಗಳೂರು 17,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ, ಇದು ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾಗಿದೆ. ಇಡೀ ಪ್ರಪಂಚಕ್ಕಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು, ಇಂಜಿನಿಯರಿಂಗ್ ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕರ್ನಾಟಕವನ್ನು ಆರಿಸಿಕೊಂಡಿವೆ” ಎಂದು ವಿವರಿಸಿದರು.

ಗೂಗಲ್ ಅತ್ಯದ್ಭುತ ಪಾಲುದಾರ:

ಆ ಪ್ರಯಾಣದಲ್ಲಿ ಗೂಗಲ್ ಅತ್ಯದ್ಭುತ ಪಾಲುದಾರನಾಗಿದೆ. ಕಳೆದ ಎರಡು ದಶಕಗಳಿಂದ, ಗೂಗಲ್ ಬೆಂಗಳೂರನ್ನು ಕೇವಲ ಒಂದು ಕಚೇರಿಯ ಸ್ಥಳವಾಗಿ ಮಾತ್ರವಲ್ಲದೆ, ಇಂಜಿನಿಯರಿಂಗ್, ಸಂಶೋಧನೆ ಮತ್ತು ನಾವೀನ್ಯತೆಗಾಗಿ ತನ್ನ ಅತ್ಯಂತ ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಂಡಿದೆ.

“ಭಾರತದಲ್ಲಿ ಗೂಗಲ್ 18 ಸಾವಿರ ಸಿಬ್ಬಂದಿ ಹೊಂದಿದ್ದು, ಅದರಲ್ಲಿ 12 ಸಾವಿರ ಸಿಬ್ಬಂದಿ ಬೆಂಗಳೂರಿನಲ್ಲಿದ್ದಾರೆ. ಇದರೊಂದಿಗೆ ಭಾರತದಲ್ಲಿ ಗೂಗಲ್ ನ ಸಿಬ್ಬಂದಿಯ 2/3 ಪ್ರಮಾಣ ಬೆಂಗಳೂರಿನಲ್ಲಿದೆ. ಇದು ನಮ್ಮ ನಗರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಮ್ಮ ಜೊತೆಗೆ ಇಷ್ಟು ಉತ್ತಮ ಸಂಬಂಧ ಹೊಂದಿರುವ ಗೂಗಲ್ ನಾಯಕರು, ನೀತಿ ರೂಪಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.

“ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೋಯ್ಯಲು, ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಎಐ ತಂತ್ರಜ್ಞಾನ ಮೂಲಕ ನಮ್ಮ ನಗರದ ಸಂಚಾರ ಸಮಸ್ಯೆಗಳನ್ನು ನಿವಾರಿಸೋಣ. 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 70 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು, ಇದನ್ನು ನಿವಾರಿಸಲು ನಾವು ಪರಿಹಾರ ಹುಡುಕುತ್ತಿದ್ದೇವೆ” ಎಂದು ಭರವಸೆ ನೀಡಿದರು.

“ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕರ್ನಾಟಕ ಹಾಗೂ ದೇಶದ ಪ್ರಗತಿಗೆ ಶ್ರಮಿಸೋಣ. ಕರ್ನಾಟಕ ಸರ್ಕಾರ ನಿಮ್ಮ ಜೊತೆಗೆ ನಿಲ್ಲಲಿದೆ” ಎಂದು ಕರೆ ನೀಡಿದರು.

CM D.K. Shivakumar Announces India’s First Government-Driven AI University, Pitches Karnataka as Global Hub for Responsible AI

Bengaluru, July 14

Chief Minister D.K. Shivakumar on Tuesday announced that Karnataka will establish India’s first government-driven Artificial Intelligence (AI) University, reaffirming the state’s ambition to become a global leader in responsible AI innovation.

He also announced that Government will set up an AI Hub as an incubation centre for research and development in AI by start ups, companies and others.

Making these announcement while inaugurating Google I/O Connect India 2026 in Bengaluru on Tuesday at BIEC, Shivakumar said the proposed university would play a pivotal role in building world-class AI talent, advancing research and strengthening collaboration between academia, industry and government.

Addressing technology leaders, innovators, entrepreneurs, developers, researchers and policymakers from across India and the world, the Chief Minister said Artificial Intelligence is the defining technological revolution of the present generation, comparable to the transformative impact of the steam engine, electricity, the internet and mobile technology.

“Bengaluru is not just India’s technology capital but one of the world’s most vibrant innovation ecosystems. Karnataka’s vision is to build one of the world’s leading centres for responsible Artificial Intelligence,” he said.

Shivakumar said Karnataka currently contributes nearly 40 per cent of India’s software exports, while Bengaluru is home to over 17,000 startups and thousands of Global Capability Centres that design and engineer products for the global market.

He said the state’s first ambition is to become an AI-native state, where Artificial Intelligence is used responsibly to improve governance and everyday lives rather than remaining a technological slogan.

“AI must help teachers teach better, doctors diagnose diseases earlier, farmers receive better advisory services, citizens access government services with dignity and speed, and small businesses compete confidently,” he said.

The Chief Minister praised Google for its long-standing partnership with Karnataka, noting that for over two decades the company has chosen Bengaluru as one of its most important global centres for engineering, research and innovation.

He said Google’s products, including Search, Android, YouTube, Maps, Chrome, Gmail and Google Pay, have transformed how Indians access knowledge, conduct business and interact with government services.

Calling for a stronger partnership, Shivakumar invited Google to collaborate with Karnataka in building AI solutions for education, healthcare, agriculture, climate resilience, urban mobility and governance.

He outlined five key areas for collaboration: developing AI tools for education, healthcare, agriculture and small businesses; supporting startups solving Indian challenges at scale; expanding AI learning opportunities for students across Karnataka; making the state a global laboratory for responsible technology; and deepening Google’s commitment as a long-term ecosystem partner.

Emphasising Karnataka’s innovation-driven culture, the Chief Minister said technological revolutions begin with curiosity and the willingness to ask, “What if we could do this differently?”

He concluded by urging developers to “build boldly”, entrepreneurs to “dream big”, researchers to continue innovating and students to never stop learning, saying Karnataka would continue shaping the future of technology while ensuring AI remains innovative, inclusive and trusted.

Key Announcements and Government Initiatives as highlighted by CM D.K. Shivakumar

Major Announcement

  • India’s first government-driven Artificial Intelligence (AI) University will be established in Karnataka to develop AI talent, promote advanced research, and foster collaboration between academia, industry and government.

Government Vision and AI Initiatives

  • Karnataka aims to become an AI-native State, integrating AI into governance and public service delivery.
  • AI will be deployed to improve:
    • Education through AI-assisted teaching.
    • Healthcare through early diagnosis and better medical support.
    • Agriculture with AI-driven advisory services for farmers.
    • Government services through faster, citizen-centric delivery.
    • Small businesses by enhancing competitiveness using AI tools.

Data Centres and Digital Infrastructure

  • Karnataka will continue strengthening its position as India’s technology hub by expanding its digital infrastructure, including data centres, to support AI innovation, cloud computing and next-generation digital services.
  • The government aims to build a robust ecosystem that supports AI research, hyperscale computing and Global Capability Centres (GCCs).

Innovation and Startup Ecosystem

  • Position Karnataka as one of the world’s leading centres for responsible Artificial Intelligence.
  • Strengthen the state’s startup ecosystem, which already has over 17,000 startups.
  • Support startups developing AI solutions for Indian and global markets.
  • Encourage greater collaboration between academia, industry and government.

Partnership with Google

The Chief Minister invited Google to deepen its partnership with Karnataka by:

  1. Building AI solutions for education, healthcare, agriculture and small businesses.
  2. Supporting startups solving India’s challenges at scale.
  3. Creating more AI learning opportunities for students across Karnataka.
  4. Making Karnataka a global laboratory for responsible AI.
  5. Continuing long-term investment in Karnataka’s technology ecosystem.

Technology and Investment Vision

  • Reinforce Karnataka’s leadership in software exports, contributing nearly 40% of India’s software exports.
  • Further expand the state’s ecosystem of Global Capability Centres (GCCs) and R&D facilities.
  • Position Karnataka as a global destination for AI innovation, advanced computing, data centres, research and digital infrastructure.

Related Articles

Back to top button