Belagavi NewsBelgaum NewsKannada NewsKarnataka NewsTravel

*ಲೊಂಡ ಮತ್ತು ಕ್ಯಾಸಲ್ ರಾಕ್ ನಡುವಿನ ರೈಲು ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್–ಲೊಂಡ–ಕ್ಯಾಸಲ್ ರಾಕ್ ಭಾಗದಲ್ಲಿ ದ್ವಿಪಥ (ರೈಲು ಮಾರ್ಗ ದ್ವಿಗುಣಗೊಳಿಸುವ) ಕಾಮಗಾರಿಯ ಕಾರಣದಿಂದ ಜಾರಿಯಲ್ಲಿದ್ದ ರೈಲು ಸಂಖ್ಯೆ 17333/17334 ಮಿರಜ್–ಕ್ಯಾಸಲ್ ರಾಕ್–ಮಿರಜ್ ಎಕ್ಸ್’ಪ್ರೆಸ್ ರೈಲುಗಳ ಲೊಂಡ ಮತ್ತು ಕ್ಯಾಸಲ್ ರಾಕ್ ನಡುವಿನ ಭಾಗಶಃ ರದ್ಧತಿಯನ್ನು ಈಗ ಪುನರಾರಂಭಿಸಲಾಗಿದೆ.

ದಿನಾಂಕ 12.12.2023 ರಿಂದ 31.08.2026 ರವರೆಗೆ ಲೊಂಡ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದಾಗಿ, ಲೊಂಡದಲ್ಲೇ ಪ್ರಯಾಣ ಕೊನೆಗೊಳ್ಳುತ್ತಿದ್ದ ರೈಲು ಸಂಖ್ಯೆ 17333 ಮಿರಜ್–ಕ್ಯಾಸಲ್ ರಾಕ್ ಎಕ್ಸ್’ಪ್ರೆಸ್ ಸೇವೆಯನ್ನು ದಿನಾಂಕ 15.08.2026 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಪುನರಾರಂಭಿಸಲಾಗುವುದು. ಈ ರೈಲು ಇನ್ಮುಂದೆ ಲೊಂಡ ಬದಲಿಗೆ ಕ್ಯಾಸಲ್ ರಾಕ್ವರೆಗೆ ಸಂಚರಿಸಿ ಅಲ್ಲಿಯೇ ಕೊನೆಗೊಳ್ಳಲಿದೆ.

ದಿನಾಂಕ 12.12.2023 ರಿಂದ 31.08.2026 ರವರೆಗೆ ಕ್ಯಾಸಲ್ ರಾಕ್ ಮತ್ತು ಲೊಂಡ ನಡುವೆ ಭಾಗಶಃ ರದ್ದಾಗಿ, ಕ್ಯಾಸಲ್ ರಾಕ್ ಬದಲಿಗೆ ಲೊಂಡದಿಂದ ಹೊರಡುತ್ತಿದ್ದ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮಿರಜ್ ಎಕ್ಸ್’ಪ್ರೆಸ್ ಸೇವೆಯನ್ನು ಸಹ ದಿನಾಂಕ 15.08.2026 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಪುನರಾರಂಭಿಸಲಾಗುವುದು. ಈ ರೈಲು ಇನ್ಮುಂದೆ ಲೊಂಡ ಬದಲಿಗೆ ಕ್ಯಾಸಲ್ ರಾಕ್ನಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button