ಪ್ರಗತಿವಾಹಿನಿ ಸುದ್ದಿ, ಹುಕ್ಕೆರಿ; ಭಾರತ ದೇಶದ ಪ್ರಾಚೀನ ಸನಾತನ ಧರ್ಮವನ್ನು ಆಧುನಿಕ ವಿಶ್ವಕ್ಕೆ ಪರಿಚಯಿಸಿದ ಸಂತರಾದ ಆಚಾರ್ಯ ಶಾಂತಿಸಾಗರ ಮುನಿ ಹಾಗೂ ಸ್ವಾಮಿ ವಿವೇಕಾನಂದ ಅವರ ಕೊಡುಗೆ ಅಮೂಲ್ಯವಾಗಿದೆ ಎಂದು ಶ್ರವಣಬೆಳಗೋಳದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆಯುತ್ತಿರುವ ಆಚಾರ್ಯಶ್ರೀ ಶಾಂತಿ ಸಾಗರ ಮುನಿದೀಕ್ಷಾ ಶತಾಬ್ದಿ ಮಹೋತ್ಸವ ನಿಮಿತ್ಯ ನಡೆಯುತ್ತಿರುವ ಶಾಂತಿ ಸಾಗರ ಫೌಂಡೇಷನ್ ಬೆಂಗಳೂರ ಮಹಾವೀರ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಪಂಚಕಲ್ಯಾಣ ಪ್ರತಿಷ್ಠಾನ ಮಹೋತ್ಸವ, ಆಚಾರ್ಯ ಶ್ರೀ ಶಾಂತಿ ಸಾಗರ ವಿದ್ಯಾಪೀಠ ಹಾಗೂ ವರ್ಧಮಾನ ಸಾಗರ ಸಮುದಾಯ ಭವನ ಹಾಗೂ ಶಾಂತಿ ಶಾಲಾ ಹೊಸೂರ ಇದರ ಭೂಮಿ ಪೂಜಾ ಹಾಗೂ ಅಡಿಗಲ್ಲು ಸಮಾರಂಭದ ಮತ್ತು ನೆರೆಪರಿಹಾರ ವಿತರಣೆ ನೇತೃತ್ವ ವಹಿಸಿ ಮಾತನಾಡಿದರು.
ತೀರ್ಥಂಕರರ ನಂತರ ಅಳಿವಿನಂಚಿನಲ್ಲಿದ್ದ ಜೈನ ಧರ್ಮವನ್ನು ಮುನಿದೀಕ್ಷೆ ಪಡೆದು ಪುನುರುತ್ಥಾನ ಮಾಡಿದ ಕೀರ್ತಿ ಪ್ರಥಮಾಚಾರ್ಯ ಶಾಂತಿ ಸಾಗರ ಮಹಾರಾಜರಿಗೆ ಸಲ್ಲುತ್ತದೆ. ಯರನಾಳ ಗ್ರಾಮವನ್ನು ಇಡೀ ದೇಶಕ್ಕೆ ಪರಿಚಿಯಿಸಿ ಐತಿಹಾಸಿಕ ಕ್ಷೇತ್ರವಾಗಿ ಮಾರ್ಪಗೊಳಿಸಿದ್ದಾರೆ. ಜನ ಕಲ್ಯಾಣದ ಮೂಲಕ ಮಹಾವೀರ ನಿಲಜಗಿ ಕುಟುಂಬ ಶೈಕ್ಷಣಿಕವಾಗಿ ರಾಷ್ಟ್ರಸೇವೆ ಮಾಡುತ್ತಿರುವ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವಾಗಿ ಬೆಳೆಯಲಿದೆ ಎಂದರು.
ಮುನಿ ಚಂದ್ರಪ್ರಭು ಮಹಾರಾಜರು ಸಾನಿಧ್ಯವಹಿಸಿ ಮಾತನಾಡಿ, ಧರ್ಮವನ್ನು ಆಚರಣೆ ಮಾಡುವುದಕ್ಕಿಂತ ಶೃದ್ದಾ ಮನೋಭಾವನೆಯಿಂದ ಮೈಗೂಡಿಸಿಕೊಂಡಲ್ಲಿ ನಮ್ಮಲ್ಲಿ ಧಾರ್ಮಿಕತೆಯ ಮನೋಭಾವನೆ ಬೆಳೆಯುತ್ತದೆ. ಒಂದೇ ಜಾತಿಗೆ ಸೀಮಿತಗೊಳ್ಳದೆ ಎಲ್ಲ ಧರ್ಮದಲ್ಲಿ ದೇಶಭಿಮಾನದ ಜೀವಾತ್ಮದ ಧಾರ್ಮಿಕ ಕಾರ್ಯಗಳು ನಡೆಯಬೇಕು ಎಂದರು.
ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ, ಉದ್ಯಮಿ ಪೃಥ್ವಿ ಕತ್ತಿ ಮಾತನಾಡಿದರು.
ಬೆಳಗಾವಿ, ಸಾಂಗಲಿ, ಕೊಲ್ಹಾಪೂರ ಜಿಲ್ಲೆಯ ನರೆಹಾವಳಿಗೀಡದಾದ ೩೦೦ ಜನ ನೆರೆಸಂತ್ರಸ್ತರಿಗೆ ತಲಾ ೧೦ ಸಾವಿರ ರೂ ಹಾಗೂ ಪಾಶ್ಚಾಪೂರ, ಹುಣಶ್ಯಾಳದ ಮತ್ತು ಕೊಲ್ಹಾಪೂರ ಜೈನಮಂದಿರಗಳಿಗೆ ತಲಾ ೧ ಲಕ್ಷ ಚೆಕ್ ವಿತರಿಸಿದರು.
ಅಧ್ಯಕ್ಷ ವಿನೋದ ದೊಡ್ಡಣ್ಣವರ ಪ್ರಸ್ತಾವಿಕವಾಗಿ ಮಾತನಾಡಿ ಪಂಚ ಕಲ್ಯಾಣದ ಮುನ್ನಾದಿನ ಜನಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವ ಪರಂಪರೆಗೆ ಶ್ರೀಗಳು ಅದೇಶಿಸಿದ್ದಾರೆ. ದಿಕ್ಷಾ ನಿಮತ್ಯ ೩೦ ಪ್ರತಿಷ್ಠಾನಗಳು ನಡೆಯುತ್ತಿವೆ ಎಂದರು.
ಜೈನ ಸಭಾ ಉಪಾಧ್ಯಕ್ಷ ಎಸಿ ಪಾಟೀಲ, ಜೈಪೂರದ ಅಶೋಕ ಜೈನ, ಅಶೋಕ ಪಾಟ್ನಿ, ಜಿ,ಪಂ ಸದಸ್ಯ ಅರ್ಜುನ ಪಾಟೀಲ, ತಾ.ಪಂ ಸದಸ್ಯ ಬಾಳಪ್ಪಾ ಅಕ್ಕತಂಗೇರಹಾಳ, ಗ್ರಾ.ಪಂ ಅಧ್ಯಕ್ಷ ಶಾಂತವ್ವಾ ಪಾಟೀಲ, ವಿನೋದ ದೊಡ್ಡನ್ನವರ, ಪುಷ್ಪಕ ಹಣಮನ್ನವರ, ರಾಜು ಜಕ್ಕನ್ನವರ, ಅಭಿನಂದನ ಜಾಭನ್ನವರ, ಬಾಹುಬಲಿ ನಾಗನೂರಿ, ಕಿರಣ ಶೇಟ್, ಕುಮುದಚಂದ ಸೋನಿ, ಅನೀಲ ಶೇಟ್, ಶ್ರಾವಕಶ್ರಾವಕಿಯರು ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ಮಹಾವೀರ ನಿಲಜಗಿ ಸ್ವಾಗತಿಸಿದರು. ಪಂಚಕಲ್ಯಾಣದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ