*ಸಿಎಂ ವಿಜಯ್ ಅವರನ್ನು ಅಪ್ಪಿಕೊಳ್ಳಬೇಕೆಂದು ಪಟ್ಟು ಹಿಡಿದು ರಸ್ತೆಯಲ್ಲಿಯೇ ಮಲಗಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಅವರ ಮಹಿಳಾ ಅಭಿಮಾನಿಯೊಬ್ಬರು, ವಿಜಯ್ ಅವರನ್ನು ಭೇಟಿಯಾಗಿ ಅಪ್ಪಿಕೊಳ್ಳಬೇಕು ಎಂದು ಹಠ ಹಿಡಿದು ರಸ್ತೆಯಲ್ಲಿಯೇ ಮಲಗಿ ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ.
ದೆಹಲಿಯ ಜಂತರ್ ಮಂತರ್ ಬಳಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಕುಳಿತ ಮಹಿಳೆ ವಿಜಯ್ ಅವರನ್ನು ಭೇಟಿಯಾಗಿ ತಬ್ಬಿಕೊಳ್ಳಬೇಕು. ಇದು ನನ್ನ ಜೀವನದ ಕೊನೆ ಆಸೆ ಎಂದು ಪಟ್ಟು ಹಿಡಿದಿದ್ದಾಳೆ.
ನಡುರಸ್ತೆಯಲ್ಲಿಯೇ ಮಹಿಳೆ ಮಲಗಿಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ರಸ್ತೆಯಿಂದ ತೆರವುಗೊಳಿಸಲು ಪ್ರಯತ್ನಿಸಿದರೂ, ವಿಜಯ್ ಬಂದು ತಮ್ಮನ್ನು ಅಪ್ಪಿಕೊಳ್ಳುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದು ಕುಳಿತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಜಂತರ್ ಮಂತರ್ ಸಮೀಪದ ಟ್ರಾಫಿಕ್ ಸಿಗ್ನಲ್ ಬಳಿ ಸೆಪ್ಟೆಂಬರ್ 29ರಂದು ಮಹಿಳೆಯೊಬ್ಬರು ಈ ರೀತಿ ಹುಚ್ಚಾಟವಾಡಿ ಮೊಂಡು ಹಠ ಹಿಡಿದಿದ್ದಾರೆ. ಸುತ್ತಲೂ ಪೊಲೀಸರು ನಿಂತು ಆಕೆಯನ್ನು ಅಲ್ಲಿಂದ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಮಹಿಳೆಯನ್ನು ಪ್ರಶ್ನಿಸಿದಾಗ, “ತಮಿಳುನಾಡು ಸಿಎಂ ವಿಜಯ್ ಬಂದು ನನ್ನನ್ನು ಅಪ್ಪಿಕೊಳ್ಳುವವರೆಗೆ ನಾನು ಇಲ್ಲಿಂದ ಹೋಗುವುದಿಲ್ಲ” ಎಂದು ತಿಳಿಸಿದ್ದಾಳೆ. ಅಲ್ಲದೇ ವಿಜಯ್ ಅವರನ್ನು ಭೇಟಿಯಾಗುವುದೇ ತನ್ನ ಕೊನೆಯ ಆಸೆ ಎಂದು ಹೇಳಿದ್ದಾಳೆ.
ಪೊಲಿಸರು ಆಕೆಯ ಮನವೊಲಿಕೆಗೆ ಸಾಕಷ್ಟು ಯತ್ನ ನಡೆಸಿದ್ದಾರೆ. ರಸ್ತೆಯಲ್ಲಿ ಮಲಗಿದರೆ ಸಾರ್ವಜನಿಕರಿಗೆ ಸಂಚಾರ ತೊಂದರೆಯಾಗುತ್ತದೆ ಎಂದು ಬುದ್ಧಿ ಹೇಳಿದ್ದಾರೆ. ಆದರೂ ಮಹಿಳೆ ಅಲ್ಲಿಯೇ ಕುಳಿತಿದ್ದಾಳೆ. ಮಹಿಳೆ ಹುಚ್ಚಾಟಕ್ಕೆ ಪೊಲೀಸರು ದಂಗಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



