Belagavi NewsBelgaum NewsCrimeKannada NewsKarnataka News
*ಬೆಳಗಾವಿಯಲ್ಲಿ ದಂಪತಿ ನಡುವೆ ಗಲಾಟೆ; ಪತ್ನಿ ಹತ್ಯೆ ಮಾಡಿದ ಪತಿ?*

ಪ್ರಗತಿವಾಹಿನಿ ಸುದ್ದಿ: ದಂಪತಿ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಮಾರಕ ಆಯುಧದಿಂದ ಹತ್ಯೆ ಮಾಡಿರುವ ಆರೋಪ ಪತಿ ವಿರುದ್ಧ ಕೇಳಿಬಂದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ.
ಮಾಡಲಗಿ ಗ್ರಾಮದ ಕಲ್ಲವ್ವ ಸದಾಶಿವ ಮರಡಿ (55) ಮೃತಪಟ್ಟ ಮಹಿಳೆ. ಅವರ ಪತಿ ಸದಾಶಿವ ಮರಡಿ (65) ಹತ್ಯೆ ಆರೋಪ ಎದುರಿಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ನಡುವೆ ನಡೆದ ಗಲಾಟೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಕಾರಣ ಹಾಗೂ ಹತ್ಯೆಯ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




