*ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸುನೀಲ ಚಿಗುಳಕರ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಮಾವುಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುನೀಲ ಚಿಗುಳಕರ ಅವರನ್ನು ಗುರುವಾರ ಬೆಳಗಾವಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ ಬೂದಿಹಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯದರ್ಶಿಯಾಗಿ ಎಂ.ಬಿ. ಅಂಗಡಿ, ಉಪಾಧ್ಯಕ್ಷರಾಗಿ ಸಂಜೀವ ಕೋಷ್ಟಿ, ಬಿ.ಜಿ.ಹಿರೇಮಠ, ನಾಗೇಶ ಡೊಂಕರಿ, ಡಾ.ನವೀನ ಶೆಟ್ಟಿಗಾರ, ಮಹಿಳಾ ಘಟಕದ ಅಧ್ಯಕ್ಷರಾಗಿ ಚಂದಾ ನರಸಗೌಡ, ಸಂಘಟನಾ ಕಾರ್ಯದರ್ಶಿಯಾಗಿ ವಸಂತ ಪಾಟೀಲ, ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವಾಸ ಗಾವಡೆ, ಜಿಲ್ಲಾ ಸಂಚಾಲಕರಾಗಿ ಸಂಜಯ ಪವಾರ, ಸಿ.ಐ.ಪಾಟೀಲ, ಸಿದ್ಧಪ್ಪ ನಾಯ್ಕ, ಮಹೇಶ ಸಡೇಕರ, ಸಚಿನ್ ಕುಡಚಿ, ವೈ.ಎಸ್ ಪಾಟೀಲ, ಎನ್.ಡಿ.ಪಾಟೀಲ, ಉಮೇಶ್ ಕುಲಕರ್ಣಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ವಿಶ್ವಜಿತ್ ಹಸ್ತೆ, ದಯಾನಂದ ತಾರಿಹಾಳಕರ, ರಾಜಾರಾಮ ಕುಕಡೋಳಕರ, ಅಶೋಕ ಪರಮಾಜ, ಅರುಣ ಪಾಟೀಲ, ಸುರೇಳ ಕಳ್ಳೇಕರ, ಎನ್.ಡಿ. ಪಾಟೀಲ, ವಾಮನರಾವ ಕುಲಕರ್ಣಿ, ಪರಶುರಾಮ ಗೋರಲ, ಅನೀಲ ಕದಮ, ಅಶೋಕ ಅಣ್ಣಿಗೇರಿ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ಹೊಸ ಕಾರ್ಯಕಾರಿ ಸಮಿತಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು. ಆರ್.ಪಿ. ವಂಟಗುಡಿ ಸ್ವಾಗತಿಸಿದರು. ಬಿ.ಜಿ ಹಿರೇಮಠ ಸಭೆ ನಿರ್ವಹಿಸಿದರು, ಎಂ.ಬಿ. ಅಂಗಡಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




