
ಯುವನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಯುವನಿಧಿ ಪ್ಲಸ್’ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಯುವಕ-ಯುವತಿಯರಿಗೆ ಉಚಿತ ಕೌಶಲ ತರಬೇತಿ ನೀಡಲಾಗುತ್ತಿದೆ.
ಸ್ವಾವಲಂಬಿ ಬದುಕು ಮತ್ತು ಉತ್ತಮ ಉದ್ಯೋಗಾವಕಾಶಗಳಿಗಾಗಿ ಈ ತರಬೇತಿ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ವಿವಿಧ ಐಟಿಐ ಕೇಂದ್ರಗಳಲ್ಲಿ ಕರ್ನಾಟಕ ಕೌಶಲಾಭಿವೃದ್ಧಿ ನಿಗಮದಿಂದ ತರಬೇತಿ ಆರಂಭವಾಗಲಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ನಿರುದ್ಯೋಗಿ ಯುವಜನರಿಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರಮುಖ ಸರ್ಕಾರಿ ಹಾಗೂ ತಾಂತ್ರಿಕ ತರಬೇತಿ ಸಂಸ್ಥೆಗಳಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ತಮ್ಮ ಸಮೀಪದ ಕೆಳಗಿನ ಯಾವುದೇ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು:
ಕೌಶಲ ತರಬೇತಿ ನಡೆಯುವ ಸ್ಥಳಗಳು:
ಐಟಿಐ ಕದ್ರಿ, ಮಂಗಳೂರು
ಮಹಿಳಾ ಐಟಿಐ, ಮಂಗಳೂರು
ಕೆಜಿಟಿಟಿಐ ಕದ್ರಿ, ಮಂಗಳೂರು
ಜಿಟಿಟಿಸಿ ಬೈಕಂಪಾಡಿ, ಮಂಗಳೂರು
ಸರ್ಕಾರಿ ಐಟಿಐ, ಬೆಳ್ತಂಗಡಿ
ಸರ್ಕಾರಿ ಐಟಿಐ, ಪುತ್ತೂರು
ಸರ್ಕಾರಿ ಐಟಿಐ, ವಿಟ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




