ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಕಲಚೇತನ ಮಹಿಳೆಯ ಜೀವನಕ್ಕೆ ಆಧಾರವಾಗುವ ಹೊಲಿಗೆ ಯಂತ್ರ ನೀಡುವ ಮೂಲಕ ನಿಯತಿ ಫೌಂಡೇಶನ್ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಿತು.
ಅಂಜಲಿ ಸಾಂಬ್ರೇಕರ್ ಎನ್ನುವ ಮಹಿಳೆ ತನ್ನ ಜೀವನಕ್ಕೆ ಆಧಾರವಾಗುವಂತಹ ಎಂಬ್ರೈಡರಿ ಮತ್ತು ಪಿಕೋ ಫಾಲ್ ಯಂತ್ರವನ್ನು ಕೊಡಿಸುವಂತೆ ನಿಯತಿಫೌಂಡೇಶನ್ ಅಧ್ಯಕ್ಷೆ ಸೋನಾಲಿ ಸರ್ನೋಬತ್ ಅವರನ್ನು ಕೋರಿದ್ದರು. ನಿಯತಿ ಫೌಂಡೇಶನ್ ತನ್ನ ಹೋಮ್ ಮಿನಿಸ್ಟರ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾಡಿದ ವಿನಂತಿ ಮನ್ನಿಸಿದ ಜೀತೋ ಮಹಿಳಾ ಸಂಘಟನೆ 5 ಸಾವಿರ ರೂ. ದೇಣಿಗೆ ನೀಡಿತು. ಈ ಹಣಕ್ಕೆ ನಿಯತಿಫೌಂಡೇಶನ್ ಮತ್ತಷ್ಟು ಸೇರಿಸಿ ಅಂಜಲಿ ಸಾಂಬ್ರೇಕರ್ ಗೆ ನೂತನ ಹೊಲಿಗೆ ಯಂತ್ರವನ್ನು ಒದಗಿಸಲಾಯಿತು.
ಜಿತೋ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಹರ್ದಿ, ಕಾರ್ಯದರ್ಶಿ ಕಿವಿಶಾ ದೋಷಿ, ನಿಯತಿಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಉಪಾಧ್ಯಕ್ಷ ಡಾ.ಸಮೀರ್ ಸರ್ನೋಬತ್, ಕಾರ್ಯದರ್ಶಿ ಮೋನಾಲಿ ಶಹಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ