
ಪ್ರಗತಿವಾಹಿನಿ ಸುದ್ದಿ: ಮಹಾಲಯ ಅಮವಾಸ್ಯೆ ದಿನದಂದೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಚೇರಿಯಲ್ಲಿ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಪಿಡಬ್ಲ್ಯೂಡಿ ಇಲಾಖೆಯಲ್ಲಿ ಬಾಕಿ ಬ್ಲ್ ವಿವಾದಕ್ಕೆ ಬೇಸತ್ತು ಯಾರೋ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಆತಂಕಗೊಂಡಿದ್ದಾರೆ.
ರಾಯಚೂರಿನ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಮೇಲ್ಭಾಗದಲ್ಲಿದ್ದ ಹುಣಸೆ ಮರದಲ್ಲಿ ಮಾನವ ಆಕೃತಿಯ ಕಪ್ಪು ಗೊಂಬೆಯನ್ನು ನೇತುಹಾಕಲಾಗಿದೆ.
ಸೌಲಭ್ಯಗಳ ಪರಿಶೀಲನೆಗೆ ತೆರಳಿದ್ದ ಸಿಬ್ಬಂದಿಯೊಬ್ಬರಿಗೆ ಈ ಗೊಂಬೆ ಮೊದಲಿಗೆ ಗೋಚರಿಸಿದ್ದು, ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಸಿಬ್ಬಂದಿ ಈ ಗೊಂಬೆಯನ್ನು ಸುಟ್ಟು ಹಾಕಿದ್ದಾರೆ.
ಕಚೇರಿಯಲ್ಲಿ ಬಾಕಿ ಉಳಿದಿರುವ ಬಿಲ್ಗಳು ಮತ್ತು ತೆರವುಗೊಳ್ಳದ ಫೈಲ್ಗಳಿಂದ ಬೇಸತ್ತ ಯಾರೋ ಈ ವಾಮಾಚಾರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಪಿಡಬ್ಲ್ಯೂಡಿ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




