Kannada NewsKarnataka NewsLatest

ಸಿಪಿಎಲ್ ಟ್ರೋಪಿ ಗೆದ್ದ ವ್ಹಿಎಸ್‌ಎಂ ಬಾಯ್ಸ್

 ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಿಕ್ಕೋಡಿ ಪ್ರಿಮಿಯರ್ ಲೀಗ್(ಸಿಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಫೈನಲ್ ಪಂದ್ಯದಲ್ಲಿ ಡಿಕೆ ಬುಲ್ಸ್ ವಿರುದ್ಧ ವ್ಹಿಎಸ್‌ಎಂ ಬಾಯ್ಸ್ ಭರ್ಜರಿ ಗೆಲವು ಪಡೆದು ೨೦೨೦ ನೆಯ ಸಾಲಿನ ಸಿಪಿಎಲ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.
ಕಳೆದ ಒಂದು ವಾರದಿಂದ ಚಿಕ್ಕೋಡಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಿಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಕ್ರಾಂತ ಮಾನೆ ಮಾಲಿಕತ್ವದ ವ್ಹಿಎಸ್‌ಎಂ ಬಾಯ್ಸ್, ಡಬ್ಬನ್ನವರ ಕುರಣಿ ಮಾಲಿಕತ್ವದ ಡಿಕೆಬುಲ್ಸ್, ರಾಜು ಸಂಕೇಶ್ವರಿ ಮಾಲಿಕತ್ವದ ಐಸಿಬಿ ಕ್ಯಾಪಿಟಲ್ಸ್, ಸಂಜು ಕವಟಗಿಮಠ ಮಾಲಿಕತ್ವದ ಜೆಕೆ ವಾರಿಯರ‍್ಸ್, ಗಣೇಶ ಮೋಹಿತೆ ನೇತೃತ್ವದ ಯುಸಿಸಿ ಬಾಯ್ಸ್, ಮುದ್ದಸರ ಜಮಾದಾರ ನೇತೃತ್ವದ ಎಂಜೆಆರ್‌ಎಸ್  ತಂಡಗಳು ಪಾಲ್ಗೊಂಡಿದ್ದವು.

ಪ್ರತಿ ತಂಡವು ಐದು ಲೀಗ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದವು. ಅಂತಿಮವಾಗಿ ಡಿಕೆ ಬುಲ್ಸ್ ಮತ್ತು ವ್ಹಿಎಸ್‌ಎಂ ಬಾಯ್ಸ್, ಐಸಿಬಿ ಕ್ಯಾಪಿಟಲ್ಸ್ ಮತ್ತು ಯುಸಿಸಿ ಸೆಮಿಪೈನಲ್‌ಗೆ ಅವಕಾಶ ಪಡೆದವು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಡಿಕೆಬುಲ್ಸ್ ವಿರುದ್ಧ ವ್ಹಿಎಸ್‌ಎಂ ಬಾಯ್ಸ್ ಭರ್ಜರಿಯಾಗಿ ಗೆಲವು ಪಡೆದು ಪ್ರಥಮ ಸ್ಥಾನ ಪಡೆಯಿತು. ಡಿಕೆಬುಲ್ಸ್ ದ್ವಿತೀಯ ಹಾಗೂ ಐಸಿಬಿ ಕ್ಯಾಪಿಟಲ್ಸ್ ತೃತೀಯ ಸ್ಥಾನ ಪಡೆದುಕೊಂಡವು.
ವಿಜೇತ ತಂಡಳಿಗೆ ನಗದು ಬಹುಮಾನ ಹಾಗೂ ಟ್ರೋಪಿಯನ್ನು ಕಂದಾಯ ಉಪತಹಶೀಲ್ದಾರ ಅರುಣ ಶ್ರೀಖಂಡೆ, ಪುರಸಭೆ ಸದಸ್ಯ ಅನಿಲ ಮಾನೆ, ಬಾಬು ಮಿರ್ಜೆ, ಸಂಕೇತ ಮಾಂಜ್ರೇಕರ, ವಿಕ್ರಾಂತ ಮಾನೆ, ಕಾಶಿನಾಥ ಕುರಣಿ, ಪ್ರಭು ಡಬ್ಬನ್ನವರ, ರಾಜು ಸಂಕೇಶ್ವರಿ, ಪ್ರಶಾಂತ ತೋಟಗೇರ, ಮಹಾದೇವ ಬೆಂಡವಾಡೆ, ಬಾಬು ಸಮ್ಮತಶೆಟ್ಟಿ, ರಾಜ್ ಜಾಧವ ವಿತರಿಸಿದರು.
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಐಸಿಬಿ ತಂಡದ ವಿನೋಧ ಕಾಮಕರ ಬ್ಯಾಟಿಂಗ್ ವಿಭಾಗದಲ್ಲಿ ಮ್ಯಾನ್ ಆಫ್ ಸಿರಿಜ್ ಪಡೆದರೆ ಬೌಲಿಂಗ್ ವಿಭಾಗದಲ್ಲಿ ಪ್ರವೀಣ ಮಾನೆ ಪಡೆದರು. ವ್ಹಿಎಸ್‌ಎಂ ತಂಡದ ಆಟಗಾರ ಬಂಡು ಭೋಸಲೆ ಅತೀ ಹೆಚ್ಚು ರನ್ ತೆಗೆದಿರುವುದಕ್ಕೆ ಟ್ರೋಪಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಹೇಶ ನೂಲಿ, ಸಂದೀಪ ಶೇರಖಾನೆ, ಪ್ರವೀಣ ಬ್ಯಾಕೂಡೆ, ದೀಪಕ ಕಾಂಬಳೆ, ಆನಂದ ಬ್ಯಾಕೂಡೆ, ಶಿವಾನಂದ ಡಬ್ಬ, ಸಂತೋಷ ಸೊಲ್ಲಾಪೂರೆ, ಪ್ರವೀಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button