*BREAKING: ಲಾಡ್ಜ್ ರೂಂ ನಲ್ಲಿ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಿಯಕರ*

ಪ್ರಗತಿವಾಹಿನಿ ಸುದ್ದಿ: ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ ಪ್ರಿಯಕರನೊಬ್ಬ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಲಾಡ್ಜ್ ರೂಂ ನ ಮಂಜದ ಮೇಲೆ, ರೂಮಿನ ತುಂಬ ಹಾಗೂ ಮೆಟ್ಟಿಲುಗಳ ಮೇಲೆ ಬಿದ್ದಿರುವ ರಕ್ತ ಕೃತ್ಯದ ಘೋರತೆಗೆ ಸಾಕ್ಷಿಯಾಗಿದೆ. ಇದನ್ನು ಕಂಡ ಲಾಡ್ಜ್ ಸಿಬ್ಬಿಂದಿ ಬೆಚ್ಚಿ ಬಿದ್ದಿದ್ದಾರೆ.
ಪ್ರಿಯತಮೆ ಬೇರೊಬ್ಬನ ಜೊತೆ ಸಂಬಂಧದಲ್ಲಿರಬಹುದು ಎಂಬ ಅನುಮಾನಕ್ಕೆ ಪ್ರಿಯಕರ ಆಕೆಯನ್ನು ಕೊಲೆಗೈದಿದ್ದಾನೆ ಎನಲಾಗಿದೆ. ನಾಲ್ಕು ವರ್ಷಗಳ ಪ್ರೇಮಕಥೆ ದುರಂತ ಅಂತ್ಯಕಂಡಿದೆ.
ಕೇರಳ ಮೂಲದ ಗಂಗಾ ಕೊಲೆಯಾದ ಯುವತಿ. ಗೋಕುಲ್ ಕೊಲೆ ಮಾಡಿರುವ ಪ್ರಿಯಕರ. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೇರಳ ಮೂಲದವರಾದ ಗಂಗಾ ಮತ್ತು ಗೋಕುಲ್ ಇಬ್ಬರೂ ನರ್ಸಿಂಗ್ ಕೋರ್ಸ್ ವ್ಯಾಸಂಗ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಕೆಲಸ ಹುಡುಕುವ ಸಲುವಾಗಿ ನಗರಕ್ಕೆ ಬಂದಿದ್ದರು. ಈ ವೇಳೆ, ಗುರುವಾರ (ನಿನ್ನೆ) ಕಾಟನ್‌ಪೇಟೆಯ ಮಸ್ತಾನ್ ದರ್ಗಾ ಬಳಿಯಿರುವ ‘ರೆಜೆನ್ಸಿ ಲಾಡ್ಜ್’ ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಉಳಿದುಕೊಂಡಿದ್ದರು.
ಲಾಡ್ಜ್‌ಗೆ ಬಂದಿದ್ದ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಂಗಾಳಿಗೆ ಬೇರೊಬ್ಬ ಯುವಕನ ಜೊತೆಗೆ ಸಂಬಂಧವಿದೆ ಎಂಬ ಅನುಮಾನಹೊಂದಿದ್ದ ಗೋಕುಲ್ ಇದೇ ವಿಚಾಅರ ಪ್ರಸ್ತಾಅಪಿಸಿ ಜಗಳ ಶುರುಮಾಡಿದ್ದ. ಈ ಜಗಳ ವಿಕೋಪಕ್ಕೆ ಹೋಗಿ ಗೋಕುಲ್, ಲಾಡ್ಜ್‌ನ ರೂಮಿನೊಳಗೆ ಗಂಗಾಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಟನ್‌ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.


