ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ಮುಂದುವರಿದಿದ್ದು, ಸಾಂಬ್ರಾ ಮತ್ತು ಮುತಗಾದಲ್ಲಿ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆೆಬ್ಬಾಳಕರ್ ಶನಿವಾರ ಚಾಲನೆ ನೀಡಿದರು.
ಸಾಂಬ್ರಾ
ಸಾಂಬ್ರಾ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ ಒಟ್ಟು ಒಂದು ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಆರಂಭವಾಗಿದೆ.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ರಸ್ತೆಗಳು ಸಂಪೂರ್ಣವಾಗಿ ನಾಶವಾಗಿದೆ. ಸಾಂಬ್ರಾ ಗ್ರಾಮದ ಒಳಾಂಗಣ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಹಾಗೂ ಸಾಂಬ್ರಾ ಗ್ರಾಮದಿಂದ ಅಷ್ಠೆ ರಸ್ತೆ (ಬಳ್ಳಾರಿ ನಾಲಾವರೆಗೆ) ಡಾಂಬರೀಕರಣದ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಬಾಹುಕಣ್ಣ, ನಾಗೇಶ ದೇಸಾಯಿ, ಪಿಆರ್ ಇಡಿ ಇಂಜಿನೀಯರ್ ಬಣ್ಣೂರ್, ಈರಪ್ಪ ಸುಳೇಭಾವಿ, ಬಸು ದೇಸಾಯಿ, ಸದು ಪಾಟೀಲ, ಮಹೇಂದ್ರ ಗೋಟೆ, ಗುರುನಾಥ ಡೊಂಗರಕಿ, ಗುರುನಾಥ ಅಷ್ಟೇಕರ್, ರಾಜು ಚೌಹಾಣ, ಲಕ್ಷ್ಮಣ ಸುಳೇಭಾವಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮುತಗಾದಲ್ಲಿ ರಸ್ತೆ ಕಾಮಗಾರಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದ ನೆಹರು ನಗರ, ಮಠಾಗಲ್ಲಿ, ಚಾವಡಿಗಲ್ಲಿ, ಮಾರುತಿ ಗಲ್ಲಿ, ಲಕ್ಷ್ಮೀ ಗಲ್ಲಿ, ಪಾಟೀಲ ಗಲ್ಲಿ, ಬಸತಿ ಗಲ್ಲಿ, ಗಾಂಧಿ ಗಲ್ಲಿ, ಗೋಕುಲ್ ನಗರ, ಶಿವಾಜಿ ಕಾಲೋನಿ, ಜನತಾ ಕಾಲೋನಿ ಪ್ರದೇಶಗಳಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಸುಮಾರು ಒಂದು ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆಗಳ ಡಾಂಬರೀಕರಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಪಿಆರ್ ಇಡಿ ಇಂಜಿನಿಯರ್ ಬಣ್ಣೂರ್, ಗಜಾನನ ಕಣಬರಕರ್, ಶ್ಯಾಮ್ ಮುತಗೆಕರ್, ನಾಗೇಶ ದೇಸಾಯಿ, ಬಾಹು ಸಿಂಧೋಳಕರ್, ಮಾರುತಿ ಪಾಟೀಲ, ಗಜಾನನ ಪಾಟೀಲ, ಹನಮಂತ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ