ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ತಾಲೂಕಿನ ಕಾಡಂಚಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಅವರ ಕಣ್ಣಿನಲ್ಲಿ ಆನಂದ ಭಾಷ್ಪ ತರಿಸಿದರು.
ಜಾಂಬೋಟಿ, ಚಿಗುಳೆ, ನಾಗರಗಾಳಿ, ಲೋಂಡಾ ಮತ್ತಿತರ ಹಳ್ಳಿಗಳ 850 ಜನರಿಗೆ ರಾಜ್ಯ ಸರಕಾರದ ಅಕ್ರಮ ಸಕ್ರಮ ಯೋಜನೆಯನ್ವಯ ಹಕ್ಕುಸ ಪತ್ರ ವಿತರಿಸಿದರು. 40-50 ವರ್ಷಗಳಿಂದ ಅವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರೂ ಹಕ್ಕುಪತ್ರ ಪಡೆಯಲು ಸಾಧ್ಯವಾಗಿರಲಿಲ್ಲ.
ಹಕ್ಕು ಪತ್ರ ಒದಗಿಸಲು ಕಾರಣರಾದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ವಯೋವೃದ್ದ ಮಹಿಳೆಯರು ಅಪ್ಪಿ ಮುದ್ದಾಡಿ, ಹರಸಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾದರು.
ಖಾನಾಪುರ ತಹಸಿಲ್ದಾರ, ಸಿಪಿಐ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ