Kannada NewsKarnataka NewsLatest

ಮಹಾನಗರದ ಶಾಲೆಗಳಿಗೆ ಸ್ಮಾರ್ಟ್ ಸಿಟಿಯಿಂದ ಸ್ಮಾರ್ಟ್ ಕ್ಲಾಸ್ ರೂಂ ಕೊಡುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಮಾರ್ಟ್ ಸಿಟಿ ಯೋಜನೆ ರಸ್ತೆ, ಚರಂಡಿ, ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್, ಸ್ಮಾರ್ಟ್ ಪೋಲ್ಸ್ ಮುಂತಾದ ಯೋಜನೆಗಳ ಜೊತೆಯಲ್ಲಿ ಇದೀಗ ಶಿಕ್ಷಣ ಕ್ಷೇತ್ರಕ್ಕೂ ಯೋಜನೆಗಳನ್ನು ರೂಪಿಸಿದೆ.
ಬೆಳಗಾವಿ ನಗರದ ಸರಕಾರಿ ಶಾಲೆಗಳನ್ನು ಸ್ಮಾರ್ಟ್ ಮಾಡುವತ್ತ ಸ್ಮಾರ್ಟ್ ಸಿಟಿ ಯೋಜನೆ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಿದೆ.
 ಇಂಟರ್ಯಾಕ್ಟಿವ್ ಮಲ್ಟಿ ಪರ್ಪಸ್ ಕಂಪ್ಯೂಟರ್ ಬಳಸಿ ಬೆಳಗಾವಿ ನಗರದ 147 ಸರಕಾರಿ ಶಾಲೆಗಳಲ್ಲಿ ವಿಶೇಷ ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ ಮಾಡಲಾಗುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಸ್ಮಾರ್ಟ್ ಕ್ಲಾಸ್ ರೂಂ ಯೋಜನೆಯ ಅಂತಿಮ ರೂಪು ರೇಷೆ ತಯಾರಿಸಲು ಗುರುವಾರ ಸಭೆ ಆಯೋಜಿಸಲಾಗಿತ್ತು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಡಿಪಿಐ ಎ.ಬಿ.ಪುಂಡಲೀಕ್, ಸ್ಮಾರ್ಟ್ ಸಿಟಿ ಯೋಜನೆ ಎಇಇ ಕಿರಣ ಸುಬ್ಬರಾವ್, ಶಿಕ್ಷಣ  ಇಲಾಖೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಎಲ್ಲ ಭಾಷೆಯ ಮಾಧ್ಯಮಗಳಲ್ಲಿ ಅಗತ್ಯವಾದ ಪಠ್ಯಕ್ರಮಗಳು, ಶಿಕ್ಷಣ ಇಲಾಖೆಯ ಅವಶ್ಯಕತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. 
ಒಟ್ಟೂ 6 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸ್ಮಾರ್ಟ ಕ್ಲಾಸ್ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಎಂಡಿ ಶಶಿಧರ ಕುರೇರ ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button