ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ದೇಶಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದೇಶದ ಜನತೆ ಸ್ವಯಂಪ್ರೇರಣೆಯಿಂದ ಮನೆಯಿಂದ ಹೊರಬರದೇ ಕರ್ಫ್ಯೂ ವಿಧಿಸಿಕೊಂಡಿದ್ದಾರೆ.
ಕೊರೋನಾ ವಿರುದ್ಧ ಹೋರಾಡುತ್ತಿರುವ ಪೊಲೀಸ್, ವೈದ್ಯಕೀಯ ಸಿಬ್ಬಂದಿ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಸಂಜೆ 5ಗಂಟೆ ಜನರು ತಮ್ಮ ತಮ್ಮ ಮನೆ ಕಿಟಕಿ, ಬಾಗಿಲು, ಅಂಗಳಗಳಲ್ಲಿ ನಿಂತು ಶಂಖ, ಜಾಗಟೆ, ತಟ್ಟೆ, ಚಪ್ಪಾಳೆ ಹೊಡೆಯುವ ಮೂಲಕ ಗೌರವ ಸಲ್ಲಿಸಿದರು.
ರಾಜ್ಯದ ಬಹುತೇಕ ನಗರ, ಜಿಲ್ಲೆ, ತಾಲೂಕುಗಳಲ್ಲೂ ರಾಜಕೀಯ ಮುಖಂಡರು, ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಕಿಟಕಿ, ಮಾಳಿಗೆಗಳ ಮೆಲೆ ನಿಂತು ಚಪ್ಪಾಳೆ, ಜಾಗಟೆ, ಗಂಟೆಗಳ ಮೂಲಕ ಅಭಿನಂದಿಸಿದ್ದು ಗಮನಾರ್ಹವಾಗಿತ್ತು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಾಲ್ಕನಿಯಲ್ಲಿ ಕುಟುಂಬ ಸದಸ್ಯರ ಜತೆ ನಿಂತು ಚಪ್ಪಾಳೆ ತಟ್ಟಿದರೆ, ಸಾಚಿವ ಕೆ ಎಸ್ ಈಶ್ವರಪ್ಪ ಕೂಡ ಕುಟುಂಬ ಸದಸ್ಯರ ಜತೆ ಸೇರಿ ಜಾಗಟೆ ಹೊಡೆಯುವ ಮೂಲಕ ಗಮನ ಸೆಳೆದರು.
ಡಿಸಿಎಂ ಅಶ್ವತ್ಥ ನಾರಾಯಣ, ಸಚಿವ ಶ್ರೀರಾಮುಲು, ಶಾಸಕ ಹ್ಯಾರಿಸ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಕೂಡ ಚಪ್ಪಾಳೆ, ಜಾಗಟೆ ಹೊಡೆಯುವ ಮುಲಕ ಕೊವಿಡ್ 19 ವಿರುದ್ಧ ಹೋರಾಡುತ್ತಿರುವವರಿಗೆ ಧನ್ಯವಾದ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ