ಅವರೇನು ಆತ್ಮಾಹುತಿ ದಾಳಿಕೋರರಾ?

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ವಿಶ್ವಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಜಾಮುದ್ದೀನ್ ಸಭೆಯ ಅವಶ್ಯಕತೆ ಇತ್ತಾ ಎಂದು ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಮತನಾಡಿದ ಅವಾರು ದೆಹಲಿಯಲ್ಲಿ ನಡೆದ ಈ ಧಾರ್ಮಿಕ ಸಭೆಯಲ್ಲಿ ಎಷ್ಟು ಜನ ಭಾಗವಹಿಸಿದ್ದರು? ಸಭೆ ನಡೆಸಲು ಅನುಮತಿ ಕೊಟ್ಟವರು ಯಾರು? ಅವರೇನು ಆತ್ಮಾಹುತಿ ದಾಳಿಕೋರರಾ? ಇದನ್ನು ದೇಶದ ನಾಗರೀಕರು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಜಾಮುದ್ದೀನ್ ಜಮಾಯತ್​ನಲ್ಲಿ ಶಿವಮೊಗ್ಗದವರು ಯಾರೂ ಸಹ ನೇರವಾಗಿ ಭಾಗವಹಿಸಿರಲಿಲ್ಲ. ಆದರೆ ಕೆಲವರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೆಲವರು ಆ ಧಾರ್ಮಿಕ ಸಭೆಯ ಸುತ್ತಮುತ್ತ ಓಡಾಡಿದ್ದಾರೆ ಎನ್ನುವ ಮಾಹಿತಿ ಇದೆ. ಈ ಕುರಿತು ಎಲ್ಲವನ್ನು ತನಿಖೆ ಮಾಡುತ್ತಿದ್ದೇವೆ ಎಂದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಕೊರೋನಾ ಹರಡಿರುವ ಕುರಿತಾಗಿ ಮಾತನಾಡಿದರು. ದೆಹಲಿಯಿಂದ ಕರ್ನಾಟಕಕ್ಕೆ ಒಟ್ಟು 24 ಮಂದಿ ಬಂದಿದ್ದಾರೆ. ಅದರಲ್ಲಿ ಮೂರು ಮಂದಿ ಬೇರೆ ಬೇರೆ ಜಿಲ್ಲೆಯವರಿದ್ದಾರೆ. 11 ಮಂದಿ ಈಗಾಗಲೇ ಕ್ವಾರಂಟೈನ್ ಮುಗಿಸಿದ್ದಾರೆ. ಉಳಿದ 10 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರಿಗೂ ಪರೀಕ್ಷೆ ನಡೆಸಲಾಗಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button