ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಕಾಟಗಾಳಿ ಗ್ರಾಮದ ವ್ಯಾಪ್ತಿಯ ವಾಲ್ಮೀಕಿ ನಗರ ಬಳಿಯ ಅರಣ್ಯದಲ್ಲಿ ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ನಡೆಸಿದ
ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತಯಾರಿಸಿದ 25 ಲೀ ಕಳ್ಳಭಟ್ಟಿ ಸಾರಾಯಿ, 50 ಲೀ
ಬೆಲ್ಲದ ರಸಾಯನ, ಒಂದು ಬೈಕ್ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿಗಳನ್ನು
ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಉಪ ಆಯುಕ್ತರು ಹಾಗೂ ಉಪ ಅಧೀಕ್ಷಕರು ಬೆಳಗಾವಿ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಖಾನಾಪುರ ಅಬಕಾರಿ ನಿರೀಕ್ಷಕ ಮಹೇಶ ಪರೀಟ, ಉಪ ನಿರೀಕ್ಷಕ ರವಿನಾರಾಯಣ, ಸಿಬ್ಬಂದಿ ಹಣಮಂತ ನಾಗನೂರ, ಮಹಾಂತೇಶ ವಗ್ಗಿ, ಮಂಜುನಾಥ ಬಳಗಪ್ಪನವರ, ಪ್ರವೀಣ ಯಡ್ರಾವಿ ಹಾಗೂ ಇತರರು ಇದ್ದರು.
ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳಭಟ್ಟಿ ತಯಾರಿಕೆಯಲ್ಲಿ
ಭಾಗಿಯಾಗಿದ್ದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ದಾಳಿಯಲ್ಲಿ ವಶಕ್ಕೆ ಪಡೆದ
ವಸ್ತುಗಳ ಮೌಲ್ಯ ಅಂದಾಜು 22 ಸಾವಿರ ಎಂದು ಮೂಲಗಳು ತಿಳಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ