Latest

ಮನೆಗಳ ಲೈಟ್ ಮಾತ್ರ ಬಂದ್ ಆಗುವುದರಿಂದ ಸಮಸ್ಯೆಯಾಗದು

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ಮನೆಗಳ ಲೈಟ್ ಗಳನ್ನು ಬಂದ್ ಮಾಡುವುದಕ್ಕೆ ಮಾತ್ರ. ಆದರೆ ಇತರ ವಿದ್ಯುತ್ ಬಳಕೆ ಹಾಗೆಯೇ ಮುಂದುವರಿಯಲಿದೆ. ಹಾಗಾಗಿ ಗ್ರಿಡ್ ಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಇಂಧನ ಇಲಾಖೆ ಕಾರ್ಯದರ್ಶಿ ಸಂಜೀವ್ ನಂದನ್ ಸಹಾಯ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮನೆಗಳಲ್ಲಿ ಟಿವಿ, ಫ್ಯಾನ್, ಎಸ್. ಫ್ರಿಡ್ಜ್ ಗಳು ಎಂದಿನಂತೆ ಕೆಲಸ ಮಾಡುತ್ತಿರುತ್ತವೆ. ಅವುಗಳನ್ನು ಬಂದ್ ಮಾಡಲು ಪ್ರಧಾನಿ ಕರೆ ನೀಡಿಲ್ಲ. ಬೀದಿ ದೀಪಗಳನ್ನು ಆರಿಸಲು ಅವರು ಹೇಳಿಲ್ಲ. ಆಸ್ಪತ್ರೆ ಸೇರಿದಂತೆ ಅವಶ್ಯಕ ಸೇವೆಗಳ ಸ್ಥಳಗಲ್ಲಿ ವಿದ್ಯುತ್ ದೀಪಗಳು ಎಂತಿನಂತೆಯೇ ಉರಿಯುತ್ತಿರುತ್ತವೆ. ಹಾಗಾಗಿ ಮನೆಗಳಲ್ಲಿನ ಲೈಟ್ ಆಫ್ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಭಾನುವಾರ ರಾತ್ರಿ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವಂತೆ ಇಡೀ ದೇಶದಲ್ಲಿ ಮನೆಗಳ ಲೈಟ್ ಆಫ್ ಮಾಡುವ ಪ್ರಕ್ರಿಯೆ ಎದುರಿಸಲು ಇಂಧನ ಇಲಾಖೆ ಸಜ್ಜಾಗಿದೆ. ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೇರೆ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬೀದಿ ದೀಪಗಳನ್ನು ಆರಿಸದಿರುವಂತೆ ಅವರು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

Home add -Advt

ದೇಶಾದ್ಯಂತ ಒಮ್ಮೆಲೇ ಲೈಟ್ ಆಫ್ ಮಾಡಿದರೆ ಕತ್ತಲಲ್ಲಿ ಮುಳುಗುತ್ತಾ ಭಾರತ?

Related Articles

Back to top button