ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಯಾವುದೇ ಪಾರ್ಟಿ, ಜಾಲಿ ರೈಡ್ ಗಾಗಿ ಹೊರಗೆ ಹೋಗಿರಲಿಲ್ಲ. ಔಷಧಿಗಾಗಿ ಮನೆಯಿಂದ ಹೊರಗೆ ಹೋಗಿದ್ದೆ ಎಂದು ನಟಿ ಶರ್ಮಿಳಾ ಮಾಂಡ್ರೆ ಅಪಘಾತ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದರೂ ತಡರಾತ್ರಿ ಸ್ನೇಹಿತರ ಜೊತೆ ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಹೋಗಿ ಪ್ಲ್ಹೈಒವರ್ ಕಂಬಕ್ಕೆ ಡಿಕ್ಕಿಹೊಡೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸ್ವತಃ ಶರ್ಮಿಳಾ ಮಾಂಡ್ರೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾನು ಔಷಧಿಯನ್ನು ಖರೀದಿಸಲು ಮಾತ್ರ ಮನೆಯಿಂದ ಹೊರ ಹೋಗಿದ್ದೆ. ಲಾಕ್‍ಡೌನ್ ಸಮಯದಲ್ಲಿ ಓಡಾಡಲು ಪಾಸ್ ಹೊಂದಿದ್ದ ಸ್ನೇಹಿತರ ಸಹಾಯವನ್ನು ಪಡೆದಿದ್ದೆ ಅಷ್ಟೆ ಎಂದಿದ್ದಾರೆ.
ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನನ್ನ ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಇಬ್ಬರ ಸಹಾಯವನ್ನು ಕೇಳಿದೆ. ಯಾಕೆಂದರೆ ಅವರ ಬಳಿ ಲಾಕ್‍ಡೌನ್ ವೇಳೆ ಓಡಾಡುವ ಪಾಸ್ ಇತ್ತು. ಹೀಗಾಗಿ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡೆ. ಈ ವೇಳೆ ಅಪಘಾತವಾಗಿದೆ. ಆದರೆ ನಾನು ಕಾರು ಓಡಿಸುತ್ತಿರಲಿಲ್ಲ. ಕಾರಿನ ಹಿಂಬದಿ ಸೀಟಿನಲ್ಲಿ ನಾನು ಕುಳಿತಿದ್ದೆ. ನನ್ನ ಸ್ನೇಹಿತ ಡಾನ್ ಕಾರು ಓಡಿಸುತ್ತಿದ್ದ. ಈ ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ ಎಂದು ವಿವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ