ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಏರಪೋರ್ಟ್ ನಲ್ಲಿ ಎಂ.ಇ.ಎಸ್ ನಾಯಕರು ಉದ್ದಟತನ ಪ್ರದರ್ಶಿಸಿ ಮುಖಭಂಗ ಅನುಭವಿಸಿದರು.
ಬೆಳಗಾವಿ ಏರಪೋರ್ಟ್ ಗೆ ಬಂದಿಳಿದ ಎನ್.ಸಿ.ಪಿ ಮುಖ್ಯಸ್ಥ ಶರದ ಪವಾರ ಮುಂದೆ ನಾಡದ್ರೋಹಿ ಘೋಷಣೆ ಕೂಗಲು ಆರಂಭಿಸಿದರು.
ಇದರಿಂದ ಗರಂ ಆದ ಶರದ ಪವಾರ್ ಘೋಷಣೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರು.
ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾಯಿಜೇ ಎಂದು ಘೋಷಣೆ ಕೂಗುತ್ತಿದ್ದ ಎಂ.ಇ.ಎಸ್ ನಾಯಕರ ಬಾಯಿ ಮುಚ್ಚಿಸಿದರು ಶರದ್ ಪವಾರ್.
ಶರದ ಪವಾರ ಸೂಚನೆಯಿಂದ ಘೋಷಣೆ ಅರ್ಧಕ್ಕೆ ನಿಲ್ಲಿಸಿದ ಎಂ.ಇ.ಎಸ್ ನಾಯಕರು ತೀವ್ರ ಮುಖಭಂಗ ಅನುಭವಿಸುವಂತಾಯಿತು.
ಬೆಳಗಾವಿ ಸಮೀಪದ ಕಡೋಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶರದ ಪವಾರ ಆಗಮಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ