Latest

ಪ್ರಗತಿವಾಹಿನಿ ಇಂಪ್ಯಾಕ್ಟ್ – ಗ್ರಾಮ ಪಂಚಾಯಿತಿ ಹಗಲು ದರೋಡೆ ತನಿಖೆ ಆರಂಭ

ಪ್ರಗತಿವಾಹಿನಿ ಸುದ್ದಿ, ಶಿರಸಿ – ತಾಲೂಕಿನ ಶಿವಳ್ಳಿ (ಹೆಗಡೆಕಟ್ಟಾ) ಗ್ರಾಮ ಪಂಚಾಯಿತಿ ಲಾಕ್ ಡೌನ್ ಸಂದರ್ಭದಲ್ಲಿ ಪಾಸ್ ನೀಡುವುದಕ್ಕೆ ಹಣ ವಸೂಲಿ ಮಾಡುತ್ತಿರುವ ಕುರಿತು ತಕ್ಷಣ ತನಿಖೆ ಆರಂಭಿಸಲಾಗಿದೆ ಎಂದು ಕಾರವಾರ ಜಿಲ್ಲಾ ಪಂಚಾಯಿತಿ ಸಿಇಒ ಎಂ.ರೋಶನ್ ತಿಳಿಸಿದ್ದಾರೆ.

ಕೆಲವೇ ನಿಮಿಷದ ಮೊದಲು ಪ್ರಗತಿವಾಹಿನಿ ಈ ಸಂಬಂಧ ವಿಶೇಷ ವರದಿ ಪ್ರಕಟಿಸಿತ್ತು. ಕೊರೋನಾ ಸಂಕಷ್ಟದ ಮಧ್ಯೆ ಗ್ರಾಮ ಪಂಚಾಯಿತಿ ಜನರಿಂದ ಪಾಸ್ ನೀಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಕುರಿತು ದಾಖಲೆ ಸಹಿತ ವಿವರ ಪ್ರಕಟಿಸಲಾಗಿತ್ತು.

ಈ ಕುರಿತು ಎಂ.ರೋಶನ್ ಪ್ರತಿಕ್ರಿಯಿಸಿದ್ದು, ಪ್ರಗತಿವಾಹಿನಿ ವರದಿ ಆಧರಿಸಿ ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿಯಲ್ಲಿ ವರದಿ ಪ್ರಕಟವಾದ ಮರುಕ್ಷಣವೇ ತನಿಖೆಗೆ ಆದೇಶಿಸಿರುವುದು ಶ್ಲಾಘನೀಯವಾಗಿದೆ.

ಸುದ್ದಿಯ ಲಿಂಕ್ ಇಲ್ಲಿದೆ –

ಕೊರೋನಾ ಸಂಕಷ್ಟದಲ್ಲೇ ಗ್ರಾಮ ಪಂಚಾಯಿತಿಯಿಂದ ಹಗಲು ದರೋಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button