Kannada NewsKarnataka NewsLatest

ದೆಹಲಿ ಮರ್ಕಜ್ ಜಮಾತ್ ಗೆ ಹೋಗಿದ್ದ ಮಾಹಿತಿ ಬಚ್ಚಿಟ್ಟವರ ಮೇಲೆ ಬಿತ್ತು ಕೇಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೆಹಲಿ ಮರ್ಕಜ ಜಮಾತನಲ್ಲಿ ಭಾಗವಹಿಸಿ, ವೈದ್ಯಕೀಯ ತಪಾಸಣೆಗೂ ಹೋಗದೇ ನೈಜ್ಯತೆಯನ್ನು ಬಚ್ಚಿಟ್ಟ ಯುವಕ ಹಾಗೂ ಆತನಿಗೆ ಸಹಕರಿಸಿದ 6 ಜನರ ವಿರುದ್ಧ ಹಿರೇಬಾಗೆವಾಡಿ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.

ಮಾರ್ಚ್ -೨೦೨೦ ರಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಟ್ ಮಸೀದಿಯಲ್ಲಿ ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಿರೇಬಾಗೇವಾಡಿ ಗ್ರಾಮದ ಯುವಕನೊಬ್ಬ ತಾನು ವೈದ್ಯಕೀಯ ತಪಾಸಣೆಗೂ ಒಳಗಾಗದೇ, ದೆಹಲಿಯ ಜಮಾತನಲ್ಲಿ ಭಾಗವಹಿಸಿದ ಸತ್ಯ ಸಂಗತಿಯನ್ನು ಟಾಸ್ಕ್ ಪೋರ್ಸನವರಗೂ ಬಚ್ಚಿಟ್ಟಿದ್ದ.

ಇವನೊಂದಿಗೆ ಅದೇ ಗ್ರಾಮದ ತಬ್ಲಿಕ್ ಜಮಾತನ ಕಾರ್ಯದರ್ಶಿ, ಮುಖಂಡ ಹಾಗೂ ಆತನ ಮನೆಯವರೂ ಸಹ ಆತನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಹೀಗೆ ಅವರೆಲ್ಲರೂ ಸರ್ಕಾರದ ಆದೇಶವನ್ನು ಧಿಕ್ಕರಿಸಿರುತ್ತಾರೆ ಎಂದು ಕೋವಿಡ್ -೧೯ ಟಾಸ್ಕ್ ಪೋರ್ಸಿನ ನೋಡಲ್ ಅಧಿಕಾರಿಯವರು ನೀಡಿದ ದೂರಿನಂತೆ 7 ಜನರ ಮೇಲೆ ಹಿರೇಬಾಗೆವಾಡಿ ಪೊಲೀಸ್ ಠಾಣೆ (ಗುನ್ನಾ ನಂಬರ;೩೬/೨೦೨೦ ಕಲಂ.೧೪೩, ೨೦೨, ೨೭೦, ೩೦೮ ಸಹಕಲಂ ೧೪೯ ಐಪಿಸಿ ನೇದ್ದರಡಿ)ಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಜನರಿಗೆ ಕೋವಿಡ್-೧೯ ಸೊಂಕು ದೃಢಪಟ್ಟಿದ್ದರಿಂದ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದ್ದುದರಿಂದ ಸದರಿ ಸಭೆಯಲ್ಲಿ ಭಾಗವಹಿಸಿದವರು ಯಾವುದೇ ಮುಜಗರ ಪಡದೆ ಸ್ವ ಇಚ್ಛೆಯಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಅಂಥವರ ಮಾಹಿತಿಯನ್ನು ಸಾರ್ವಜನಿಕರು ನೀಡಬೇಕು ಎಂದು ಸರ್ಕಾರ  ಹಲವು ಬಗೆಯಿಂದ ವಿನಂತಿಸಿಕೊಂಡಿದೆ.

ಆದರೆ ವಿರಪನಕೊಪ್ಪ ಗ್ರಾಮದ ೨೫ ವರ್ಷದ ಯುವಕನು ಮಾರ್ಚ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿರುತ್ತಾನೆ. ಟಾಸ್ಕ ಪೊರ್ಸದವರು ಮತ್ತು ಸ್ಥಳಿಯ ಪೊಲೀಸರು ಆತನಿಗೆ ಮತ್ತು ಆತನ ಮನೆಯ ಸದಸ್ಯರಿಗೆ ದೆಹಲಿಗೆ ಹೋದ ಬಗ್ಗೆ ವಿಚಾರಿಸಿದ್ದು ೨೫ ವಯಸ್ಸಿನ ಯುವಕನು ಸದರಿ ಸಭೆಯಲ್ಲಿ ಭಾಗವಹಿಸಿರುವುದಿಲ್ಲಾ ಅಥಣಿ ಮತ್ತು ಖಾನಾಪೂರದ ಜಮಾತಿಗೆ ಹೋದ ಬಗ್ಗೆ ಸುಳ್ಳು ಮಾಹಿತಿ ಹೇಳಿ ನಿಜ ಸಂಗತಿಯನ್ನು ಬಚ್ಚಿಟ್ಟಿದ್ದರು.

ಇದಕ್ಕೆ ಸಂಬಂಧಪಟ್ಟ ಹಿರೇಬಾಗೆವಾಡಿ ಗ್ರಾಮದ ತಬ್ಲಿಕ ಜಮಾತಿನ ಕಾರ್ಯದರ್ಶಿ ಹಾಗೂ ಇನ್ನೊಬ್ಬ ಮುಖಂಡರಿಗೆ ಈ ಬಗ್ಗೆ ಮಾಹಿತಿಯನ್ನು ಕೇಳಿದಾಗ ಅವನಂತೆ ಹೇಳಿ ಅವರೂ ಸಹ ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಬಚ್ಚಿಟ್ಟಿದ್ದರು. ಅವರೆಲ್ಲರೂ ಸರ್ಕಾರದ ಆದೇಶವನ್ನು ಧಿಕ್ಕರಿಸಿ ರೋಗ ಹರಡಿ ಅಪರಾಧಿಕ ಮಾನವ ಹತ್ಯೆ ಮಾಡಲು ಪ್ರಯತ್ನ ಮಾಡಿದ ಬಗ್ಗೆ ಸಂಭಂದಪಟ್ಟ ಕೋವಿಡ್ -೧೯ ಟಾಸ್ಕ್ ಪೋರ್ಸಿನ ನೋಡಲ್ ಅಧಿಕಾರಿಯಾದ  ರಾಜೇಂದ್ರ ಪವಾಡೆಪ್ಪ ಖಾನಾಪುರೆ ಇವರು ದೂರು ನೀಡಿದ್ದಾರೆ.

ಆ ದೂರಿನ ಆಧಾರದ ಮೇಲೆ  ಎನ್.ಎನ್.ಅಂಬಿಗೇರ, ಪೊಲೀಸ್ ಇನ್ಸಪೆಕ್ಟರ ಹಿರೇಬಾಗೆವಾಡಿ ಪೊಲೀಸ್ ಠಾಣೆ ,  ಏಳು ಜನ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button