Latest

ಉತ್ತರ ಕನ್ನಡದಲ್ಲಿ ಕೊರೋನಾಗಿಂತ ಹೆಚ್ಚು ಆತಂಕ ಸೃಷ್ಟಿಸಿದ ರೋಗ: 33 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಶಿರಸಿ – ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾಗಿಂತ ಮಂಗನಕಾಯಿಲೆ ಹೆಚ್ಚು ಆತಂಕ ಸೃಷ್ಟಿಸಿದ್ದು, 33 ಜನರಿಗೆ ಸೋಂಕು ತಗುಲಿದೆ.
ಸಿದ್ದಾಪುರದಲ್ಲಿ ಇಂದು 5 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಿನ್ನೆ  4 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಆರೋಗ್ಯ ಇಲಾಖೆ ಮೂಲಗಳ ಮಾಹಿತಿ ಪ್ರಕಾರ ಸಿದ್ದಾಪುರದ ಕೋರ್ಲಕೈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣ ದಾಖಲಾಗಿದೆ.
ಉ.ಕ ಜಿಲ್ಲೆಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 33ಕ್ಕೇರಿದೆ.
ಕೋರ್ಲಕೈ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಸಂಜೆ ಆರೋಗ್ಯ ಇಲಾಖೆಯ ಆಯುಕ್ತರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.

Related Articles

Back to top button