ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋವಿಡ್-೧೯ ಅತ್ಯಂತ ಪ್ರಮುಖ ಆರೋಗ್ಯದ ಕಂಟಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಆರ್ಟಿಸ್ಟ್ (ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್)ನೊಂದಿಗೆ ಸಹಯೋಗ ಹೊಂದಿದ್ದು ಕರ್ನಾಟಕದಾದ್ಯಂತ ತಾಯಿ ಮತ್ತು ಮಗುವಿನ ಆರೋಗ್ಯಸೇವೆಯಲ್ಲಿ ತೊಡಗಿರುವ ಆರೋಗ್ಯ ಸೇವಾ ಕಾರ್ಯಕರ್ತರಿಗೆ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಶುಶ್ರೂಷಕ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ ಸಿದ್ಧತೆಯನ್ನು ಸದೃಢಗೊಳಿಸಲು ಸಹಯೋಗ ಹೊಂದಿದೆ.
ಅತ್ಯಂತ ತೀವ್ರವಾದ ತರಬೇತಿ ಕಾರ್ಯಕ್ರಮವನ್ನು (೯೦-ನಿಮಿಷದ ಮಾಡ್ಯೂಲ್) ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಇದು ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳನ್ನೂ ಒಳಗೊಂಡಿದ್ದು ಅದರಲ್ಲಿ ರೋಗಿಗಳ ಪರೀಕ್ಷೆ ಮತ್ತು ಪ್ರವೇಶದ್ವಾರದಲ್ಲಿ ಭೇಟಿ ನೀಡುವವರು, ರೋಗದ ಮುನ್ಸೂಚನೆ ಒಳಗೊಂಡ ರೋಗಿಗಳನ್ನು ಪ್ರತ್ಯೇಕವಾಗಿ ಸಂಘಟಿಸುವುದು, ಸ್ವಚ್ಛತೆಯ ನಿಯಮಗಳು, ಪಿಪಿಇ ಬಳಸುವ ರೀತಿ, ಸೋಂಕುಗಳೆತ ಮತ್ತು ಮರುಬಳಕೆಯ ಪ್ರೊಟೋಕಾಲ್‌ಗಳು, ಪ್ರಸೂತಿ ಗೃಹ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯ ನಿರ್ವಹಣೆಯ ಮಾನದಂಡಗಳು, ವಿಭಾಗಗಳ ನಿರ್ವಹಣೆ, ಬಿಡುಗಡೆ ಮತ್ತು ಫಾಲೋ-ಅಪ್ ಸಾರಾಂಶ, ಭೇಟಿಯ ಅವಧಿ ಮತ್ತು ದೂರ ಸಂವಹನಗಳನ್ನು ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ಒದಗಿಸಲಾಗುತ್ತದೆ.
ಈ ಸಹಯೋಗದ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ, “ಎಲ್ಲ ಆಸ್ಪತ್ರೆಗಳೂ ಕೋವಿಡ್-೧೯ ಪ್ರೊಟೊಕಾಲ್ ಆಧರಿತ ಶಿಫಾರಸು ಮಾಡಲಾದ ರೂಢಿಗಳನ್ನು ಅನುಸರಿಸಬೇಕು ಮತ್ತು ಈ ಕಾರ್ಯಕ್ರಮವು ರಾಜ್ಯದಾದ್ಯಂತ ಆರೋಗ್ಯಸೇವಾ ಕಾರ್ಯಕರ್ತರಿಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ. ಆರ್ಟಿಸ್ಟ್ ಈ ತರಬೇತಿಯ ವಿಷಯವನ್ನು ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯ ಮಾರ್ಗದರ್ಶಿ ಸೂತ್ರಗಳ ಅನ್ವಯ ಅಭಿವೃದ್ಧಿಪಡಿಸಲಾಗಿದೆ. ಈ ತರಬೇತಿ ಕಾರ್ಯಕ್ರಮವು ಆರೋಗ್ಯಸೇವಾ ಕಾರ್ಯಕರ್ತರಲ್ಲಿ ಅರಿವನ್ನು ಮೂಡಿಸುವಲ್ಲಿ ಬಹುದೂರ ಸಾಗಲಿದ್ದು ಉದ್ಯೋಗಿಗಳ ವಿಶ್ವಾಸ ಹೆಚ್ಚಿಸುವುದಲ್ಲದೆ ಆಸ್ಪತ್ರೆಯ ಸನ್ನದ್ಧತೆಯನ್ನು ಸುಧಾರಿಸುತ್ತದೆ ಎಂದರು.
ಆರ್ಟಿಸ್ಟ್ ತಂಡದಿಂದ ಪ್ರತಿನಿತ್ಯ ಆನ್‌ಲೈನ್ ತರಬೇತಿ ಕೋರ್ಸ್‌ಗಳನ್ನು ನಡೆಸಲಾಗುತ್ತದೆ, ಇದರ ನೇತೃತ್ವವನ್ನು ಆರೋಗ್ಯಸೇವಾ ಕ್ಷೇತ್ರದ ಮುಂಚೂಣಿಯಲ್ಲಿರುವ ಹಾಗೂ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಹೇಮಾ ದಿವಾಕರ್ ವಹಿಸಿಕೊಂಡಿದ್ದಾರೆ. ಅವರು, ಕೋವಿಡ್-೧೯ ಆರೋಗ್ಯಸೇವೆಯೂ ಒಳಗೊಂಡು ವಿವಿಧ ವಲಯಗಳ ಮೇಲೆ ಊಹಿಸಲಾಗದಂತಹ ಪರಿಣಾಮ ಬೀರಿದೆ. ನಾವೆಲ್ಲರೂ ಚೆನ್ನಾಗಿ ಸಿದ್ಧರಾಗಿರಬೇಕಾದ
ಅತ್ಯಂತ ಅಗತ್ಯವಿದೆ. ಆದಾಗ್ಯೂ, ಬಹಳಷ್ಟು ಆರೋಗ್ಯಸೇವಾ ಕಾರ್ಯಕರ್ತರು ಪ್ರಸವಪೂರ್ವ ಆರೈಕೆ, ಸುರಕ್ಷಿತ ಹೆರಿಗೆ, ನವಜಾತ ಶಿಶು ಆರೈಕೆ, ಪ್ರತಿರಕ್ಷಣೆ ಮತ್ತು ಆಸ್ಪತ್ರೆ ನಿರ್ವಹಣೆ ಕುರಿತು ಕೋವಿಡ್-೧೯ ಪ್ರೊಟೊಕಾಲ್ ಆಧರಿತ ಶಿಫಾರಸು ಮಾಡಲಾದ ರೂಢಿಗಳ ಕುರಿತು ಅರಿವನ್ನು ಹೊಂದಿಲ್ಲ. ಆದ್ದರಿಂದ ನಾವು ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ತೊಡಗಿರುವ ಪ್ರಸೂತಿ ತಜ್ಞರು, ಸ್ತ್ರೀರೋಗ ತಜ್ಞರು, ಶುಶ್ರೂಷಕ ಸಿಬ್ಬಂದಿ, ಸಹಾಯಕ ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಛತೆಯ ಸಿಬ್ಬಂದಿಗೆ ಪರಿಣಾಮಕಾರಿ ಜ್ಞಾನ ಹಂಚಿಕೆ ಮತ್ತು ಕೌಶಲ್ಯ ವರ್ಗಾವಣೆ ಈ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ ಎಂದರು.
ಕರ್ನಾಟಕದಲ್ಲಿ ಈ ತರಬೇತಿಯನ್ನು ೨೦ ಚಾಪ್ಟರ್‌ಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆ (ಕೆಎಸ್‌ಒಜಿಎ) ಮೂಲಕ ನಿರ್ವಹಿಸಲಾಗುತ್ತಿದೆ. ಕರ್ನಾಟಕದ ಮತ್ತು ಇತರೆ ರಾಜ್ಯಗಳ ಮುಂಚೆಯೇ ಆಯ್ಕೆ ಮಾಡಲಾದ ಆಸ್ಪತ್ರೆಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಿಬ್ಬಂದಿಗೆ ಪ್ರತಿನಿತ್ಯ ತರಬೇತಿ ನೀಡಲಾಗುತ್ತದೆ. ಇಲ್ಲಿಯವರೆಗೆ ಈ ತರಬೇತಿಯು ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾಸನ, ಚನ್ನರಾಯಪಟ್ಟಣ, ಗದಗ, ಕೊಪ್ಪಳ, ಕಲ್ಬುರ್ಗಿ ಮತ್ತು ಮಂಡ್ಯಗಳಲ್ಲಿ ಪೂರ್ಣಗೊಳಿಸಲಾಗಿದೆ. ಮುಂದಿನ ೧೨ ದಿನಗಳಲ್ಲಿ ಬಾಗಲಕೋಟೆ, ಉಡುಪಿ, ಬಳ್ಳಾರಿ, ಮಂಗಳೂರು ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು, ರಾಯಚೂರು, ಶಿವಮೊಗ್ಗ, ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿ ತರಬೇತಿ ನಡೆಸಬೇಕಾಗಿದೆ.
ಈ ಕುರಿತು ಕೆಎಸ್‌ಒಜಿಎ ಅಧ್ಯಕ್ಷೆ ಡಾ.ಶೋಭನಾ ಪಟ್ಟೆದ್, ಕರ್ನಾಟಕದಾದ್ಯಂತ ಈ ಕಾರ್ಯಕ್ರಮಕ್ಕೆ ನಮ್ಮ ಚಾಪ್ಟರ್‌ಗಳು ಮತ್ತು ಆಸ್ಪತ್ರೆಗಳಿಂದ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ಬಹಳ ಸಂತೋಷಗೊಂಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಂದು ಆಸ್ಪತ್ರೆಯಿಂದಲೂ ಭಾಗವಹಿಸುವುದನ್ನು ನಾವು ದೃಢಪಡಿಸಿಕೊಳ್ಳುತ್ತಿದ್ದೇವೆ. ಭಾಗವಹಿಸಿದವರಿಂದ ನಾವು ಉತ್ತಮ ಫೀಡ್‌ಬ್ಯಾಕ್ ಪಡೆದಿದ್ದೇವೆ. ಇದು ಈ ವಲಯದ ಮೇಲೆ ಹಲವು ಪಟ್ಟು ಪರಿಣಾಮ ಬೀರಲಿರುವುದನ್ನು ನಿರೀಕ್ಷಿಸಿದ್ದೇವೆ ಎಂದರು.
ಈ ತರಬೇತಿ ಅತ್ಯಂತ ನಿರ್ದಿಷ್ಟವಾಗಿದೆ ಮತ್ತು ಭಾಗವಹಿಸುವವರ ಪೂರ್ಣ ಗಮನ ಬೇಡುತ್ತದೆ ಎನ್ನುವ ಕುರಿತು ಪಿಎನ್‌ಸಿಡಿಸಿ (ಪ್ರೆಗ್ನೆನ್ಸಿ ಅಂಡ್ ನಾನ್-ಕಮ್ಯುನಿಕಬಲ್ ಡಿಸೀಸಸ್ ಕಮಿಟಿ)- ಫಿಗೊ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಗೈನಕಾಲಜಿ ಅಂಡ್ ಅಬ್‌ಸ್ಟೆಟ್ರಿಕ್ಸ್) ಉಪಾಧ್ಯಕ್ಷೆ, ಫೊಗ್ಸಿಯ (ಫೆಡರೇಷನ್ ಆಪ್ ಅಬ್‌ಸ್ಟೆಟ್ರಿಕ್ ಅಂಡ್ ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾದ) ಗುಣಮಟ್ಟ ಸುಧಾರಣೆಯ ಉಪಕ್ರಮ ಮಾನ್ಯತಾದ ರಾಷ್ಟ್ರೀಯ ಸಂಯೋಜಕಿ ಡಾ.ಹೇಮಾ, ಈ ತರಬೇತಿಯಲ್ಲಿ ಯಾವುದೇ ತಪ್ಪುಗಳಿಲ್ಲದೆ ಈ ರೂಢಿಗಳನ್ನು ಅನುಷ್ಠಾನಗೊಳಿಸುತ್ತಾರೆ ಎಂದು ನಾವು ದೃಢಪಡಿಸಿಕೊಳ್ಳುತ್ತೇವೆ, ಏಕೆಂದರೆ ತರಬೇತಿಯ ಅಂತ್ಯದಲ್ಲಿ ಅವರು ಏನು ಕಲಿತಿದ್ದಾರೆ ಎನ್ನುವುದನ್ನು ತೋರಿಸಲು ಸೂಚಿಸುತ್ತೇವೆ ಮತ್ತು ಒಂದು ವಾರ ಮೇಲ್ಪಟ್ಟು ವಿಡಿಯೋ ತುಣಕುಗಳಿಂದ ಇದನ್ನು ದೃಢಪಡಿಸಿಕೊಳ್ಳುತ್ತೇವೆ ಎಂದರು.
ಆರ್ಟಿಸ್ಟ್ ಮಹಾರಾಷ್ಟ್ರ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ಆರೋಗ್ಯಸೇವಾ ಕಾರ್ಯಕರ್ತರಿಗೆ ತರಬೇತಿಯನ್ನು ನಿರ್ವಹಿಸುತ್ತಿದ್ದು ಅವರನ್ನು ಮಾನ್ಯತಾ ತರಬೇತಿಗಳ ಮೂಲಕ ಸುರಕ್ಷಿತ ಹೆರಿಗೆಗಳನ್ನು ನಡೆಸಲು ಸನ್ನದ್ಧರಾಗಲು ನೆರವಾಗುತ್ತಿದೆ. ಆರ್ಟಿಸ್ಟ್ ಈಗ ಕೋವಿಡ್ ಪ್ರಿಪೇರ‍್ಡ್‌ನೆಸ್ ಮಾಡ್ಯೂಲ್ ಅನ್ನು ಸೇರ್ಪಡೆ ಮಾಡಿದ್ದು ಆಸ್ಪತ್ರೆಗಳಿಗೆ ಅವರ ರೂಢಿಗಳನ್ನು ಮರು ರೂಪಿಸಿಕೊಳ್ಳಲು ಮತ್ತು ಮರು ಪ್ರಾರಂಭಿಸಲು ನೆರವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ