Latest

ರಾಜ್ಯವನ್ನೇ ಬೆಚ್ಚಿ ಬೀಳಿಸಲಿದೆಯೇ ಇಂದಿನ ಹೆಲ್ತ್ ಬುಲಿಟಿನ್?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇನ್ನು ಕೆಲವೇ ಕ್ಷಣಗಳಲ್ಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಲಿರುವ ಹೆಲ್ತ್ ಬುಲಿಟಿನ್ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಇದಕ್ಕೆ ಕಾರಣ ಎಲ್ಲೆಡೆ ಹಬ್ಬಿರುವ ವದಂತಿ. ಇಂದು ರಾಜ್ಯದ ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ದೃಢಪಟ್ಟಿದೆ ಎನ್ನುವ ಸುದ್ದಿ ಬೆಳಗ್ಗೆಯಿಂದಲೇ ಹರಡಿದೆ. ಬೆಳಗಾವಿಯ ಹಿರೇಬಾಗೇವಾಡಿ, ಉತ್ತರ ಕನ್ನಡದ ಭಟ್ಕಳ, ಬೆಂಗಳೂರಿನ ಪಾದರಾಯನಪುರ, ದಾವಣಗೆರೆ, ವಿಜಯಪುರ ಮೊದಲಾದ ಪ್ರದೇಶಗಳಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದೆ ಎನ್ನುವ ವದಂತಿ ಹರಡಿದೆ.

ಎಲ್ಲೆಡೆ ಪೊಲೀಸರು ತೀವ್ರ ಕಟ್ಟೆಚ್ಚರವಹಿಸಿರುವುದು, ಜನರ ಓಡಾಟವನ್ನು ಇನ್ನಷ್ಟು ಪ್ರತಿಬಂಧಿಸುತ್ತಿರುವುದು ಈ ಸುದ್ದಿಗೆ ಪುಷ್ಠಿ ನೀಡುತ್ತಿದೆ. 12 ಗಂಟೆಗೆ ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ ನಂತರವೇ ಇದು ಖಚಿತವಾಗಲಿದೆ.

ಏನೇ ಆದರೂ ಜನರು ಲಾಕ್ ಡಾನ್ ಸಡಿಲಗೊಳಿಸಲಾಗಿದೆ ಎನ್ನುವ ಕಾರಣಕ್ಕೆ ರಸ್ತೆಗಿಳಿಯುವ ಬದಲು ಸ್ವಯಂ ಲಾಕ್ ಡೌನ್ ಮಾಡಿಕೊಂಡು ಇನ್ನೂ ಕೆಲವು ದಿನ ಎಚ್ಚರವಹಿಸುವುದು ಸೂಕ್ತ ಎನ್ನುವುದು ಪ್ರಗತಿವಾಹಿನಿಯ ಕಳಕಳಿ. ಕೆಲವು ಮೂಲಗಳ ಪ್ರಕಾರ ಜೂನ್ ಮತ್ತು ಜುಲೈ ತಿಂಗಳಲ್ಲಿ ಕೊರೋನಾ ಮತ್ತೊಮ್ಮೆ ಅಟ್ಟಹಾಸ ಮೆರೆಯಲಿದೆ. ಇಡೀ ಭಾರತಕ್ಕೆ ದೊಡ್ಡ ಆತಂಕ ಉಂಟಾದರೂ ಆಶ್ಚರ್ಯವಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button