ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇಂದಿನ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಲು ಇನ್ನು ಕೆಲವೇ ಸಮಯ ಬಾಕಿ ಇರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಹಬ್ಬಿರುವ ದಟ್ಟ ವದಂತಿಯಿಂದಾಗಿ ಮತ್ತೆ ಆತಂಕದ ಕಾರ್ಮೋಡ ಕವಿದಿದೆ.
ಇಂದು ಮತ್ತೊಂದು ಮಹಾಸ್ಫೋಟ ಸಂಭವಿಸಲಿದೆ, ಇಂದು ಬರಲಿರುವ 38 ವರದಿಗಳ ಪೈಕಿ ಅರ್ಧದಷ್ಟು (19) ಪಾಸಿಟಿವ್ ಬರುವ ಸಾಧ್ಯತೆ ಇದೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಹರಡಿದೆ. ಇದು ನಿಜವಾದಲ್ಲಿ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟಲಿದೆ.
ಮಧ್ಯಾಹ್ನ 12 ಗಂಟೆಯ ನಂತರ ಹೆಲ್ತ್ ಬುಲಿಟಿನ್ ಪ್ರಕಟವಾಗಲಿದೆ. ಇದರಲ್ಲಿ ಬೆಳಗಾವಿಗೆ ಶಾಕ್ ಆಗುವಂತಹ ವರದಿ ಬರಲಿದೆ ಎಂದು ಎಲ್ಲೆಡೆ ವದಂತಿ ಹರಡಿದೆ. ಆತಂಕದ ಅಂಶವೆಂದರೆ ನಿಪ್ಪಾಣಿಯಲ್ಲಿ ಕ್ವಾರಂಟೈನ್ ಮಾಡಲಾಗಿರುವ ತಬ್ಲಿಘಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಂದು ಪಾಸಿಟಿವ್ ಗೆ ತುತ್ತಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಸುದ್ದಿ ನಿಜವಾದಲ್ಲಿ ಆರೇಂಜ್ ಝೋನ್ ನಲ್ಲಿರುವ ಬೆಳಗಾವಿ ರೆಡ್ ಝೋನ್ ಗೆ ಸರಿಯಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇದೇ ವೇಳೆ ಉತ್ತರ ಕನ್ನಡದ ಭಟ್ಕಳದಲ್ಲೂ 7 ವರದಿಗಳು ಪಾಸಿಟಿವ್ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯದ ಇನ್ನೂ ಅನೇಕ ಕಡೆ ಇಂದು ಬರಲಿರುವ ಹೆಲ್ತ್ ಬುಲಿಟಿನ್ ಆತಂಕ ತರಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸ್ವಲ್ಪಹೊತ್ತಿನಲ್ಲಿ ಬರಲಿರುವ ವರದಿಯಿಂದ ಎಲ್ಲವೂ ಬಯಲಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ