Latest

ವಿತ್ತ ಸಚಿವೆಯಿಂದ ಮೂರನೆ ಹಂತದ ಪ್ಯಾಕೇಜ್ ಹಂಚಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶಾದ್ಯಂತ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ಮೂರನೇ ಹಂತದ ವಿವರಣೆಯನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ವಿವರಿಸಲಿದ್ದಾರೆ.

ಇಂದು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಿಮಾನಯಾನ, ವಿದೇಶಿ ಹೂಡಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುತ್ತಾರೆ‌. ಅಲ್ಲದೆ ನಿನ್ನೆ ಪ್ರಸ್ತಾಪಿಸಿದ್ದ ಕೃಷಿ ಕ್ಷೇತ್ರಕ್ಕೆ ಇವತ್ತು ಇನ್ನಷ್ಹ್ಟು ನೆರವುಗಳನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

ಲಾಕ್ ಡೌ ನಿಂದಾಗಿ ಕಳೆದ 50 ದಿನಗಳಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.‌ ಮೊದಲೇ ಸಂಕಷ್ಟ ಎದುರಿಸುತ್ತಿದ್ದ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವಾರು ವಿಮಾನಯಾನ ಕಂಪನಿಗಳು ನೌಕರರನ್ನು ತೆಗದುಹಾಕಿವೆ. ಕೆಲವು ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕಡಿತ ಮಾಡಿವೆ. ಈ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳ ಕೆಲ ನಿಯಮಗಳನ್ನು ಸಡಿಲಿಸುವ ಸಾಧ್ಯತೆ ಇದೆ. ವಿಮಾನಯಾನ ಉದ್ಯಮ ಪುನಾರಂಭ ಆಗಲು ಅನುವಾಗುವಂತೆ ಆರ್ಥಿಕ ಸಹಾಯ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ ಕೊರೊನಾದಿಂದಾಗಿ ಚೀನಾದಿಂದ ಹೊರನಡೆಯುತ್ತಿರುವ ವಿದೇಶಿ ಕಂಪನಿಗಳನ್ನು ಭಾರತದತ್ತ ಸೆಳೆಯಲು 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

Home add -Advt

Related Articles

Back to top button