Latest

ತಳವಾರ, ಪರಿವಾರ, ಸಿದ್ದಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –   ತಳವಾರ , ಪರಿವಾರ ಹಾಗೂ ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಸಿದ್ದಿ ಸಮುದಾಯವನ್ನು   ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು  ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯ  ಅನುಸಾರ  ರಾಜ್ಯದಲ್ಲೂ  ಗೆಜೆಟ್ ಅಧಿಸೂಚನೆ  ಹೊರಡಿಸಲು  ಆದೇಶಿಸಲಾಗಿದೆ  ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
 ಕುಲಶಾಸ್ತ್ರಿ ಅಧ್ಯಯನದಂತೆ ಪರಿವಾರ ಮತ್ತು ತಳವಾರ ಜಾತಿಗಳು ನಾಯಕ ಮತ್ತು ನಾಯಿಕಡದ ಪರ್ಯಾಯವಾಗಿವೆ. ಈ ಪ್ರಸ್ತಾವನೆಯು ಕಳೆದ ಹಲವಾರು ದಶಕಗಳಿಂದ ಬೇಡಿಕೆಯಲ್ಲಿತ್ತು.  ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಎಲ್ಲಾ ಪೂರಕ ಮಾಹಿತಿಯನ್ನು ಸಲ್ಲಿಸಿತ್ತು. ಕೇಂದ್ರ ಸರ್ಕಾರವು  ಈ ಪ್ರಸ್ತಾವನೆಯನ್ನು  ಸಂಸತ್ ನಲ್ಲಿ ಅಂಗೀಕರಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಿದ ಆಧಾರದಡಿ, ರಾಜ್ಯ ಸರ್ಕಾರವು ಗೆಜೆಟ್ ಪ್ರಕಟಣೆಯನ್ನು ಹೊರಡಿಸುವಂತೆ  ಆದೇಶಿಲಾಗಿದೆ.
ಈ ಅಧಿಸೂಚನೆಯಂತೆ  ಈ‌ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲು ಅವಕಾಶವಿದೆ.

Related Articles

Related Articles

Back to top button