ಪ್ರಗತಿವಾಹಿನಿ ಸುದ್ದಿ; ಕೋಲಾರ: ವಾಹನಗಳು ಸಿಗದೇ ನಡೆದುಕೊಂಡು ಊರು ಸೇರುತ್ತಿದ್ದ ಮಹಿಳಾ ವಲಸೆ ಕಾರ್ಮಿಕರ ಮೇಲೆ ವಾಹನ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ಕಾರ್ಮಿಕ ಕುಟುಂಬದವರು ಬೆಂಗಳೂರಿನಿಂದ ನಡೆದುಕೊಂಡೇ ತಮ್ಮ ಊರಿಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಶ್ರೀನಿವಾಸಪುರ ತಾಲೂಕಿನ ಚಾಲಕ ಗೌಸ್ ಎಂಬಾತ ಕುಟುಂಬದವರಿಗೆ ಆಂಧ್ರದ ಗಡಿಯವರೆಗೂ ಡ್ರಾಪ್ ಕೊಡೋದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ತನ್ನ ಟಾಟಾ ಏಸ್ ಗಾಡಿಯಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಾನೆ. ಮಹಿಳೆಯ ಪತಿಯನ್ನು ಪ್ಲಾನ್ ಮಾಡಿ ಹಿಂದೆ ಕೂರಿಸಿದ್ದಾನೆ.
ಚಾಲಕ ಪಕ್ಕದಲ್ಲಿ ಕುಳಿತಿದ್ದ ತಾಯಿ-ಮಗಳಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ವಾಹನ ನಿಲ್ಲಿಸುವಂತೆ ಹೇಳಿದ್ದಾಳೆ. ಆದರೂ ವಾಹನ ನಿಲ್ಲಿಸದಿದ್ದಾಗ ಧರ್ಮದೇಟು ನೀಡಿದ್ದಾಳೆ. ಗಲಾಟೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಾರ್ವಜನಿಕರು ಸಹ ವಿಷಯ ತಿಳಿದು ಚಾಲಕನಿಗೆ ಥಳಿಸಿದ್ದಾರೆ.
ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ