Kannada NewsKarnataka NewsLatest

ಸಂಭಾವ್ಯ ಪ್ರವಾಹ: ಪರಿಸ್ಥಿತಿ, ಸಿದ್ಧತೆ ಅವಲೋಕಿಸಿದ ಶಾಸಕ ಗಣೇಶ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಪ್ರವಾಹ   ಬರಬಹುದಾದ ಹಿನ್ನೆಲೆಯಲ್ಲಿ ಶಾಸಕ ಗಣೇಶ ಹುಕ್ಕೇರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪ್ರವಾಹ ಬಂದಲ್ಲಿ ಎದುರಿಸಲು ಮಾಡಿಕೊಂಡಿರುವ ಸಿದ್ಧತೆ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಮಳೆಯ ಪ್ರಮಾಣಗಳನ್ನು ಗಣೇಶ ಹುಕ್ಕೇರಿ ತಿಳಿದುಕೊಂಡರು.
 
ಚಿಕ್ಕೋಡಿ ತಾಲೂಕಿನ ಕೃಷ್ಣಾನದಿ ತೀರದಲ್ಲಿ  ಪ್ರವಾಹದ ಆತಂಕ ಉಂಟಾಗುತ್ತಿದೆ. ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬೆಳಗಾವಿ ಗಡಿ ಪ್ರದೇಶದಲ್ಲಿ ಮತ್ತು ಮಹಾರಾಷ್ಟ್ರದಲ್ಲಿಯೂ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಚಿಕ್ಕೋಡಿ ತಾಲೂಕಿನ ಕೃಷ್ಣಾನದಿಯ ವ್ಯಾಪ್ತಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಹಾಗಾಗಿ ಗಣೇಶ ಹುಕ್ಕೇರಿ ದಿಢೀರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಎನ್ ಡಿ ಆರ್ ಎಫ್ ಸಿಬ್ಬಂದಿ ಜೊತೆಸಮಾಲೋಚನೆ ನಡೆಸಿ ಸಿದ್ಧತಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಕೃಷ್ಣಾನದೀಯ ತೀರದಲ್ಲಿ ಸಿದ್ಧಗೊಳಿಸಲಾಗಿರುವ ಬೋಟ್ ಗಳ ಗುಣಮಟ್ಟವನ್ನು ಪರಿಕ್ಷಿಸಿ., ಬೋಟ್ ಗಳಲ್ಲಿ ತಿರುಗಿ ಪ್ರವಾಹ ಪರಿಸ್ಥಿತಿ ಅಲೋಕಿಸಿದರು. 
ತಕ್ಷಣಕ್ಕೆ ಅಂತಹ ಆತಂಕವಿಲ್ಲ. ಪ್ರವಾಹ ಬಂದರೂ ಎದುರಿಸಲು ಎಲ್ಲ ಸಿದ್ಧತೆಗಳಾಗಿವೆ. ಹಾಗಾಗಿ ದಿ ತೀರದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಗಣೇಶ ಹುಕ್ಕೇರಿ ಧೈರ್ಯ ತುಂಬಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button