ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ, ಶೋಕಾಚರಮೆ ದಿನ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಖಾಸಗಿ ಶಾಲೆಗೆ ಶಿಕ್ಷಣ ಇಲಾಖೆ ನೊಟೀಸ್ ಜಾರಿ ಮಾಡಲು ನಿರ್ಧರಿಸಿದೆ.
ಬೆಳಗಾವಿಯ ಶರ್ಮನ್ ಆಂಗ್ಲ ಮಾಧ್ಯಮ ಶಾಲೆ ಮಂಗಳವಾರ ಮಕ್ಕಳನ್ನು ಹುಬ್ಬಳ್ಳಿಯ ವಾಟರ್ ರ್ಪಾರ್ಕ್ ಸೇರಿದಂತೆ ವಿವಿಧೆಡೆ ಪ್ರವಾಸಕ್ಕೆ ಕರೆದೊಯ್ದಿತ್ತು. ಇದಕ್ಕೆ ಶಿಕ್ಷಣ ಇಲಾಖೆಯ ಅನುಮತಿ ಪಡೆದಿಲ್ಲ. ಜನೆವರಿ ತಿಂಗಳಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ. ಜೊತೆಗೆ ಎಸ್ಎಸ್ಎಲ್ ಸಿ ಮಕ್ಕಳನ್ನಂತೂ ಕರೆದೊಯ್ಯಲೇ ಬಾರದು. ಅಲ್ಲದೆ, ಮಂಗಳವಾರ ರಾಜ್ಯಾದ್ಯಂತ ಸಿದ್ದಗಂಗಾ ಶ್ರೀಗಳ ಶೋಕಾಚರಣೆ ನಡೆಯುತ್ತಿದೆ.
ಈ ಎಲ್ಲವನ್ನೂ ಮೀರಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿರುವ ಹಿನ್ನೆಲೆಯಲ್ಲಿ ಶಾಲೆಗೆ ನೊಟೀಸ್ ಜಾರಿಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಎ.ಬಿ.ಪುಂಡಲಿಕ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ