
ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಮೂವರು ಉಗ್ರರರನ್ನು ಸದೆಬಡಿದಿದೆ. ಖಾದಿಬಾಲ್ ಸೌರಾ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
ಇಲ್ಲಿನ ಮನೆಯೊಳಗೆ ಭಯೋತ್ಪಾದಕರು ಅವಿತು ಕುಳಿತಿದ್ದರು. ಆಗ ಭಾರತೀಯ ಸೇನೆ ಆ ಮನೆಯ ಬಳಿ ತೆರಳಿ ಶರಣಾಗುವಂತೆ ಹೇಳಿದರೂ ಭಯೋತ್ಪಾದಕರು ನಿರಾಕರಿಸಿದ್ದಾರೆ. ಇದರಿಂದ ಗುಂಡಿನ ಚಕಮಕಿ ಆರಂಭವಾಗಿ ಸೈನಿಕರ ಗುಂಡೇಟಿಗೆ ಉಗ್ರರು ಕೊನೆಯುಸಿರೆಳೆದಿದ್ದಾರೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಅಧಿಕಾರಿಗಳು, 2019 ರಿಂದ ಈ ಮೂವರು ಭಯೋತ್ಪಾದಕರು ಉಗ್ರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಈ ಮೂವರಲ್ಲಿ ಒಬ್ಬರು ಕಳೆದ ತಿಂಗಳು ಇಬ್ಬರು ಬಿಎಸ್‍ಎಫ್ ಜವಾನರ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದರು. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಉಗ್ರರು ಅಡಗಿ ಕುಳಿತ ಸ್ಥಳಗಳನ್ನು ಹುಡುಕಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.