Kannada NewsKarnataka NewsLatest

ಇಬ್ಬರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ -ಡಾ.ಪ್ರಭಾಕರ ಕೊರೆ

ರೈತರ ಬದುಕಿಗೆ ಸಕ್ಕರೆ ಸಿಹಿಯಾಗಬೇಕೆ ವಿನಃ ಕಹಿಯಾಗಬಾರದು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ರೈತರು ಹಲವಾರು ಸಂಕಟಗಳನ್ನು ಎದುರಿಸುತ್ತಿದ್ದು ಅವರಿಗೆ ತುರ್ತು ಸೌಲಭ್ಯಗಳನ್ನು ನೀಡುವುದು ಅಗತ್ಯವಾಗಿದೆ. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರು, ರೈತರು ಅಕ್ಷರಶಃ ಬೀದಿಗೆ ಬಂದಿದ್ದು ಜೀವನವನ್ನು ನಿರ್ವಹಿಸುವುದು ದುಸ್ತರವಾಗಿದೆ ಎಂದು ರಾಜ್ಯಸಭಾ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಸಕ್ಕರೆ ಹಾಗೂ ಕಾರ್ಮಿಕ ಇಲಾಖೆ ಸಚಿವರಾದ  ಶಿವರಾಮ ಹೆಬ್ಬಾರ ಅವರಿಗೆ ಮನವರಿಕೆ ಮಾಡಿದರು.
ಅವರು ಬೆಳಗಾವಿಗೆ ಆಗಮಿಸಿದ ಸಚಿವ ಶಿವರಾಮ ಹೆಬ್ಬಾರ ಅವರನ್ನು ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಚೇರಿಯಲ್ಲಿ ಭೇಟಿಯಾಗಿ ಮಾತನಾಡಿದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇರ್ವರಿಗೂ ತೊಂದರೆಯಾಗದಂತೆ ಸರ್ಕಾರವು ಉಪಕ್ರಮಗಳನ್ನು ಕೈಗೊಂಡಿದ್ದೇ ಆದರೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಜಿಲ್ಲೆಯ ರೈತರ ಕಣ್ಣೀರನ್ನು ತೊಡೆದುಹಾಕುವ ಕಾರ್ಯ ಸರಕಾರದಿಂದ ನಡೆಯಬೇಕಾಗಿದೆ. ರೈತರ ಬದುಕಿಗೆ ಸಕ್ಕರೆ ಸಿಹಿಯಾಗಬೇಕೆ ವಿನಃ ಕಹಿಯಾಗಬಾರದು. ಆ ಕುರಿತು ಸರ್ಕಾರ ಹೆಚ್ಚಿನ ಮುತುವರ್ಜಿವಹಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button