Latest

ಒಂದೇ ದಿನ 17,296 ಜನರಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶದಲ್ಲಿ ಇಂದು ಒಂದೇ ದಿನ 17,296 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 407 ಜನರು ಕಳೆದ 24 ಗಂಟೆಗಳಲ್ಲಿ ಸಾವಿಗೀಡಾಗಿದ್ದಾರೆ.

ದಿನದಿಂದ ದಿನಕ್ಕೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ನತ್ತ ದೇಶ ಹೊರಳಲಿದೆಯೇ ಎನ್ನುವ ಆತಂಕ ಮೂಡಿದೆ. ಈವರೆಗೆ ಭಾರತದಲ್ಲಿ ಒಟ್ಟೂ  4,90,401 ಪ್ರಕರಣಗಳು ದಾಖಲಾಗಿದ್ದು, 15,301 ಜನರು ಸಾವಿಗೀಡಾಗಿದ್ದಾರೆ.

ಈ ಮಧ್ಯೆ ದೇಶದಲ್ಲಿ ಆಗಸ್ಟ್ 1ರ ವರೆಗೆ ಎಲ್ಲಾ ರೈಲು ಸಂಚಾರ ರದ್ದುಪಡಿಸಲು ನಿರ್ಧರಿಸಲಾಗಿದೆ. ವಿಮಾನ ಸಂಚಾರವೂ ರದ್ಧಾದರೂ ಆಶ್ಚರ್ಯವಿಲ್ಲ. ಮಹಾರಾಷ್ಟ್ರದಲ್ಲೂ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ.

ಕರ್ನಾಟಕದ ಬೆಂಗಳೂರಿನಲ್ಲಿ ನಿಯಂತ್ರಣ ತಪ್ಪಿ ಸಂಖ್ಯೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗವನ್ನು ಸಿಎಂ ಯಡಿಯೂರಪ್ಪ ಶುಕ್ರವಾರ ಬೆಳಗ್ಗೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ಪುನಃ ಲಾಕ್ ಡೌನ್ ಹೇರುವ ಪ್ರಶ್ನೆ ಇಲ್ಲ. ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸೋಂಕು ಹರಡದಂತೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದ ಉಸ್ತುವಾರಿಯಲ್ಲಿ ಸಚಿವ ಆರ್.ಅಶೋಕ ಹೆಗಲಿಗೆ ವಹಿಸಲಾಗಿದೆ.

ಏನೇ ಆಗಲಿ, ಜನರು ಇನ್ನಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಹೇಗೆಂದರೆ ಹಾಗೆ ವರ್ತಿಸಿದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button