Latest

9.6 ಮಿಲಿಯನ್ ಗಡಿ ದಾಟಿದ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಜಿನಿವಾ: ಕೊರೊನಾ ಸೋಂಕಿಗೆ ಇಡೀ ವಿಶ್ವವೇ ನಲುಗಿ ಹೋಗಿದೆ. ಜಾಗತಿಕವಾಗಿ ಹೊಸದಾಗಿ 1,79,000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಈ ಮೂಲಕ ಸೋಂಕಿತರ ಸಂಖ್ಯೆ 9.6 ಮಿಲಿಯನ್ ಗಡಿಯನ್ನು ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಡಬ್ಲ್ಯು ಹೆಚ್ ಒ ಮಾಹಿತಿ ಪ್ರಕಾರ, ಶುಕ್ರವಾರ 1,77,012 ಹೊಸ ಪ್ರಕರಣಗಳು ವರದಿಯಾಗಿದ್ದರೆ ಶನಿವಾರ 1 ಲಕ್ಷದ 79 ಸಾವಿರದ 316 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಅಮೆರಿಕಾದಲ್ಲಿ 40 ಸಾವಿರದ 526, ಬ್ರೆಜಿಲ್ ನಲ್ಲಿ 39,483, ಪ್ರಕರಣಗಳು ಪತ್ತೆಯಾಗಿದ್ದು, ಜಾಗತಿಕವಾಗಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 9.65 ಮಿಲಿಯನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 6866 ಜನ ಸಾವನ್ನಪ್ಪಿದ್ದು, ಜಾಗತಿಕವಾಗಿ ಒಟ್ಟು ಸಾವಿನ ಸಂಖ್ಯೆ 4 ಲಕ್ಷದ 91 ಸಾವಿರದ 128 ಆಗಿದೆ. ಒಟ್ಟಾರೇ ಸಾವಿನ ಸಂಖ್ಯೆಯಲ್ಲಿ ಶೇ. 74.8 ರಷ್ಟು ಅಮೆರಿಕದವರೇ ಆಗಿದ್ದಾರೆ ಎಂದು ಡಬ್ಲ್ಯೂಎಚ್ ಒ ಹೇಳಿದೆ. ಮುಂದಿನ ವಾರದಲ್ಲಿ ಜಾಗತಿಕವಾಗಿ ಸೋಂಕಿತರ ಸಂಖ್ಯೆ 10 ಮಿಲಿಯನ್ ದಾಟುವ ಸಾಧ್ಯತೆ ದಟ್ಟವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button