ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ಸಂಕೇಶ್ವರ ಹಾಗೂ ಹುಕ್ಕೇರಿ ಎರಡು ಪಟ್ಟಣ 11 ಜನರಿಗೆ ಕೋರೊನಾ ಪಾಜಟೀವ್ ರೋಗ ದೃಡಪಟ್ಟಿದೆ ಎಂದು ತಾಲೂಕಾ ವೈಧ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಂಕೇಶ್ವರ ಪಟ್ಟಣದಲ್ಲಿ 8 ಜನರಿಗೆ ಹಾಗೂ ಹುಕ್ಕೇರಿ 3 ಜನರಿಗೆ ಕೊರೊನಾ ಪಾಜೀಟಿವ್ ದೃಡಪಟ್ಟಿದೆ. ಹುಕ್ಕೇರಿಯಲ್ಲಿ ಓರ್ವ ಮಹಿಳೆ ಇಬ್ಬರು ಪುರುಷರಿಗೆ ಹಾಗೂ ಸಂಕೇಶ್ವರದಲ್ಲಿ 2 ಮಹಿಳೆಯರಿಗೆ ಹಾಗೂ 6 ಜನ ಪುರುಷರಿದ್ದಾರೆ. ಸಂಕೇಶ್ವರ ಪಟ್ಟಣದ ಪುರಸಭೆಯಲ್ಲಿ 7 ಹುಕ್ಕೇರಿ 2 ಜನರು ಪೌರಕಾರ್ಮಿಕರಾಗಿ ಕೆಲಸಮಾಡುತ್ತಿದ್ದರು.ಇದರಲ್ಲಿ ತಾಲೂಕಿನ ಬಸ್ತವಾಡ ಗ್ರಾಮದಿಂದ ಹುಕ್ಕೇರಿ ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಎರಡು ಪಟ್ಟಣಗಳ ಕಾರ್ಮಿಕರು ನೂರಾರು ಜನರ ಸಂಪರ್ಕದಲ್ಲಿದರು. ಅಲ್ಲದೆ ಪುರಸಭೆಗಳ ಅಧಿಕಾರಿಗಳು ಅಧಿಕಾರಿಗಳು ಇರುವುದರಿಂದ ಬಹುತೇಕ ಎರಡು ಪುರಸಭೆಗಳನ್ನು ಸೀಲ್ ಮಾಡಬಹುದು. ಪೌರಕಾರ್ಮಿಕರು ಎಲ್ಲ ಕಡೆ ಸಂಚರಿಸಿದ್ದರಿಂದ ಎರಡೂ ಪಟ್ಟಣಗಳ ಜನರು ಭಯದಲ್ಲಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಸತತ ಮೂರುದಿನ ಕೊರೋನಾ ರೋಗ ಹರಡುತ್ತಿದೆ ಹಾಗೂ ಸಂಕೇಶ್ವರದಲ್ಲಿ ಒಂದೇ ದಿನ 8 ಜನರಿಗೆ ಕೋರೊನಾ ದೃಢಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ